ಸತ್ಯ ಬಿಚ್ಚಿಟ್ಟ ಶ್ರೀರೆಡ್ಡಿ : ರಾಣಾ ದಗ್ಗುಬಾಟಿ ಸಹೋದರನೊಂದಿಗಿನ ಖಾಸಗಿ ಫೋಟೋ ಲೀಕ್‌…!!!

ಇತ್ತೀಚೆಗಷ್ಟೇ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುತ್ತಿದ್ದ ಕಾಸ್ಟಿಂಗ್‌ ಕೌಚ್‌ ವಿರುದ್ದ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದ ನಟಿ ಶ್ರೀರೆಡ್ಡಿ ಮತ್ತೆ ಸುದ್ದಿಯಾಗಿದ್ದಾರೆ.

ಬುಧವಾರವಷ್ಟೇ ಖ್ಯಾತ ನಿರ್ಮಾಪಕರ ಮಗನೊಬ್ಬ ಸ್ಟುಡಿಯೋದಲ್ಲಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂದು ಆರೋಪ ಮಾಡಿರುವ ಬೆನ್ನಲ್ಲೇ ಆ ನಿರ್ಮಾಪಕನ ಮಗ ಯಾರು ಎಂಬ ಬಗ್ಗೆ ಬಾಯ್ಬಿಟ್ಟಿದ್ದಾರೆ. ನಿರ್ಮಾಪಕ ಸುರೇಶ್‌ ಬಾಬು ಅವರ ಪುತ್ರ, ಬಾಹುಬಲಿಯ ರಾಣಾ ದಗ್ಗುಬಾಟಿ ಸಹೋದರ ಅಭಿರಾಂ ತನಗೆ ಮೋಸ ಮಾಡಿರುವುದಾಗಿ ಹೇಳಿದ್ದು, ಇವರಿಬ್ಬರ ಖಾಸಗಿ ಫೋಟೋಗಳನ್ನು ಬಹಿರಂಗಪಡಿಸಿದ್ದಾರೆ.

ಅಭಿರಾಂ ಹಾಗೂ ಶ್ರೀರೆಡ್ಡಿಯ ಸಲ್ಲಾಪದ ಫೋಟೋಗಳು ಲೀಕ್‌ ಆದ ಹಿನ್ನೆಲೆಯಲ್ಲಿ ಹೆಸರನ್ನು ಬಹಿಂರಗಪಡಿಸಿದ್ದಾರೆ. ಜೊತೆಗೆ ಆತ ನನ್ನನ್ನು ಬಳಸಿಕೊಂಡಿರುವುದಕ್ಕೆ ಈ ಫೋಟೋಗಳೇ ಸಾಕ್ಷಿ ಎಂದಿದ್ದಾಳೆ. ಈ ಹಿಂದೆ ಸಹ ಕೆಲ, ನಿರ್ಮಾಪಕರು, ನಿರ್ದೇಶಕರು  ನನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದರೆ ಅವಕಾಶ ನೀಡುವುದಾಗಿ ಹೇಳಿರುವುದಾಗಿಯೂ ಆರೋಪಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಅರೆಬೆತ್ತಲೆಯಾಗಿ ಪ್ರತಿಭಟಿಸಿದ್ದ ಶ್ರೀರೆಡ್ಡಿಗೆ ನಿಷೇಧ ಹೇರುವ ಕುರಿತು ಚಿತ್ರಕಲಾವಿದರ ಸಂಘ ಚಿಂತನೆ ನಡೆಸಿರುವುದಾಗಿ ತಿಳಿದುಬಂದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com