ಕೈ ಪಾಳಯಕ್ಕೆ ಆನೆ ಬಲ : ಕಾಂಗ್ರೆಸ್‌ ಸೇರ್ಪಡೆಗೊಂಡ 50ಕ್ಕೂ ಹೆಚ್ಚು ಬಿಜೆಪಿ, ಜೆಡಿಎಸ್‌ ನಾಯಕರು

ಮಂಗಳೂರು : ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಉಚ್ಚಿಲ ಭಾಗದ ಬಿಜೆಪಿ ಮತ್ತು ಜೆಡಿಎಸ್‌ನ 50ಕ್ಕೂ ಹೆಚ್ಚು ಜಿಲ್ಲಾ ಮತ್ತು ರಾಜ್ಯ ಮುಖಂಡರು ಇಂದು  ಕಾಂಗ್ರೆಸ್ ಸೇರ್ಪಡೆಗೊಂಡರು.

ಕಾಪು ರಾಜೀವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ವಿನಯ್ ಕುಮಾರ್ ಸೊರಕೆ ಕಾಂಗ್ರೆಸ್ ಸೇರ್ಪಡೆ ಗೊಂಡ ಬಿಜೆಪಿ ಮತ್ತು ಜೆಡಿಎಸ್ ಮುಖಂಡರನ್ನು ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಬಿಜೆಪಿ ಮುಖಂಡರಾದ ದುಮಣಿ ಭಟ್, ನಾರಾಯಣ ಬೆಳ್ಚಡ, ಹಾಗೂ ಜೆಡಿಎಸ್ ಮುಖಂಡರಾದ ಅಬ್ದುಲ್ ಅತೀಫ್ ದಾವೂದ್ ನೇತ್ರತ್ವದಲ್ಲಿ ಶಾಬಾನ್ ಉಚ್ಛಿಲ, ಗುರುಪ್ರಸಾದ್ ಭಟ್ ಉಚ್ಛಿಲ, ಅಬ್ದುಲ್ ಹಮೀದ್ ಸಹಿತ ಅನೇಕ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು.

ಬಿಜೆಪಿ ಮತ್ತು ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸೇರ್ಪಡೆ ಗೊಂಡ ಮುಖಂಡರ ಜೊತೆ ಮಾತನಾಡಿದ ಶಾಸಕ ವಿನಯ್ ಕುಮಾರ್ ಸೊರಕೆ ಜಾತ್ಯಾತೀತ ನಿಲುವು ಹೊಂದಿದ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ದಿನದಲ್ಲಿ ಎಲ್ಲರಿಗೂ ಸೂಕ್ತ ಸ್ಥಾನಮಾನ ವನ್ನು ನೀಡುವ ಭರವಸೆ ನೀಡಿದ್ರು. ಈತನ್ಮದ್ದೆ ಕಾಪು ವಿಧಾನ ಸಭಾ ಕ್ಷೇತ್ರದ ಬಿಜೆಪಿಯಲ್ಲಿ ಮೂವರು ಆಕಾಂಕ್ಷಿಗಳಿದ್ದು, ಸದ್ಯ ಯಾರ ಹೆಸರು ಆಯ್ಕೆಯಾಗಿ ಉಳಿದ ಇಬ್ಬರು ಅಸಮಾಧಾನ ವ್ಯಕ್ತಪಡಿಸುವುದು ಖಚಿತ, ಈ ಹಿನ್ನಲೆಯಲ್ಲಿ ಮತ್ತಷ್ಟು ಬಿಜೆಪಿ ಕಾರ್ಯಕರ್ತರು ಪಕ್ಷಾಂತರ ಮಾಡುವ ಸಾಧ್ಯತೆ ಇದೆ.

Leave a Reply

Your email address will not be published.