ನಮ್ಮ ಹಣ ಎಲ್ಲಿ ಅಂತ ಆ ಸಿದ್ದರಾಮಯ್ಯನ್ನ ಕೇಳಿ : H.D ಕುಮಾರಸ್ವಾಮಿ

ಬಳ್ಳಾರಿ : ನಾನು‌ ಯಾವುದೇ ಪಕ್ಷದ ಬಗ್ಗೆ ಮಾತನಾಡೋಲ್ಲ. ಮಣ್ಣು ಲೂಟಿಯ ಬಗ್ಗೆ ಸಹ ನಾನು ಮಾತನಾಡೋಲ್ಲ. ಈ ಬಗ್ಗೆ ಮಾತನಾಡಿದರೆ ನಿಮ್ಮ‌ಸಮಸ್ಯೆಗೆ ಪರಿಹಾರ ದೊರಕಲ್ಲ ಎಂಬುದು ನನಗೆ ಗೊತ್ತಿದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಕುಮಾರಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ  ಅವರು, ಈ ರಾಜ್ಯ ಸರಕಾರದ ಯೋಜನೆಗಳು ಜನರಿಗೆ ತಲುಪಿಲ್ಲ. ರೈತರು ನೆಮ್ಮದಿಯಿಂದ ಇಲ್ಲ, ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಿಲ್ಲ. ನಿಮ್ಮ ಹಣ ಯಾವುದಕ್ಕೆ ಖರ್ಚಾಗಿದೆ ಎಂದು ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನಿಸಿ ಎಂದಿದ್ದಾರೆ.

ಬಿಎಸ್‌ವೈ ನಿನ್ನೆ ಗಂಗಾವತಿಗೆ ಹೋಗಿದ್ದರು, ಅಲ್ಲಿ ಹೋಗಿ ಏನು ಮಾಡಿದ್ರು. ಭತ್ತ ಉಳಿಸಲಿಕ್ಕೆ ನೀರು ಬಿಟ್ಟಿದ್ದರೇ, ಭತ್ತ ಉಳಿಯುತ್ತಿತ್ತು. ರೈತರಿಗೆ ನೀರು ಕೂಡ ಬಿಡಲಿಲ್ಲ ಈ ಸರಕಾರ ಎಂದು ಆರೋಪಿಸಿದ್ದಾರೆ.

ವಿಕಾಸ ಪರ್ವ ಕಾರ್ಯಕ್ರಮದ ವೇದಿಕೆಯಿಂದ ಟಿಕೆಟ್ ಆಕಾಂಕ್ಷಿ ಕುಡುತಿನಿ ಶ್ರೀನಿವಾಸ್ ಹೊರ ನಡೆದ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಎಚ್‌ಡಿಕೆ,  ಕುಡುತಿನಿ ಶ್ರೀನಿವಾಸ್ ನನ್ನ ತಮ್ಮನೇ ಹೌದು. ಕಷ್ಟಕಾಲದಲ್ಲಿ ನನ್ನ ಜತೆ ಇದ್ದವರು ಶ್ರೀನಿವಾಸ್. ಶ್ರೀನಿವಾಸ್ ಈ ಬಾರಿ ತ್ಯಾಗ ಮಾಡಲಿ. ಮುಂದೆ ನಮ್ಮ ಸರಕಾರ ಬರುತ್ತೇ, ಆವಾಗ ಸ್ಥಾನ ಮಾನ ಕೊಡಲಾಗುತ್ತದೆ. ಇಕ್ಬಾಲ್ ಹೊತ್ತೂರ್ ಗೆ ಸ್ಥಾನ ಬಿಟ್ಟು ಕೊಡಲಿ. ಈ ಬಾರಿ ನಮ್ಮ ಸರಕಾರ ಬರುತ್ತದೆ. ಹಾಗಾಗಿ ಪಕ್ಷದ ಅಭ್ಯರ್ಥಿಗಾಗಿ ಎಲ್ಲರೂ ಶ್ರಮಿಸಿ ಎಂದು ಕರೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com