ಹಾಸನ ಡಿ.ಸಿ ರೋಹಿಣಿ ಸಿಂಧೂರಿ ನನಗೆ ಮಗಳಿದ್ದಂತೆ : ಸಚಿವ ಎ.ಮಂಜು

ಮೈಸೂರು : ನಾನೂ ಕಾನೂನು ಪಧವೀಧರ. ನನಗೂ ಕಾನೂನು ಗೊತ್ತಿದೆ. ನಾನು ಇವತ್ತಿನವರೆಗೂ ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ ಎಂದು ಪಶು ಸಂಗೋಪನಾ ಸಚಿ ಎ. ಮಂಜು ತಿಳಿಸಿದ್ದಾರೆ.

ಹಾಸನ ಡಿ.ಸಿ ರೋಹಿಣಿ ಸಿಂಧೂರಿ ನನಗೆ ಮಗಳ ಸಮಾನ. ನನಗೆ ಅವರ ವಯಸ್ಸಿನ ಮಗಳಿದ್ದಾಳೆ. ಬೇರೆಯವರ ಕುಮ್ಮಕ್ಕಿನಿಂದ ಅವರು ಈ ರೀತಿ ವರ್ತಿಸುತ್ತಿದ್ದಾರೆ. ಬಗರ್‌ ಹುಕುಂ ಸಾಗುವಳಿ ಪತ್ರಗಳನ್ನು ಕಾನೂನು ಬದ್ದವಾಗಿಯೇ ಹಂಚಿಕೆ ಮಾಡಿದ್ದೇನೆ. ರೋಹಿಣಿ ವಿರುದ್ಧ ನನಗ್ಯಾವ ಹಗೆತನವೂ ಇಲ್ಲ. ಅವರೇ ನನ್ನ ವಿಚಾರದಲ್ಲಿ ದುರುದ್ದೇಶ ಪೂರ್ವಕವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com