ಗೋ ಬ್ಯಾಕ್‌ ಮೋದಿ ಎಂದ ರಮ್ಯಾಗೆ ಟ್ವೀಟ್‌ ಮೂಲಕವೇ ಟಾಂಗ್‌ ನೀಡಿದ ಪ್ರತಾಪ್‌ ಸಿಂಹ

ಮೈಸೂರು : ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತಂತೆ ಗೋ ಬ್ಯಾಕ್‌ ಮೋದಿ ಎಂದು ಟ್ವೀಟ್‌ ಮಾಡಿರುವ ಮಾಜಿ ಸಂಸದೆ ರಮ್ಯಾ ವಿರುದ್ಧ ಸಂಸದ ಪ್ರತಾಪ್‌ ಸಿಂಹ ಟ್ವೀಟ್‌ ಮೂಲಕ ಟಾಂಗ್ ನೀಡಿದ್ದಾರೆ.

ತಮಿಳುನಾಡಿಗೆ ಮೋದಿ ಹೋಗುತ್ತಿರುವುದಕ್ಕೆ ತಮಿಳಿಗರು ಗೋ ಬ್ಯಾಕ್‌ ಮೋದಿ ಚಳುವಳಿ ಮಾಡಿದ್ದರು. ಈ ಬಗ್ಗೆ ಮತ್ತೂ ಜೋರಾಗಿ ಹೇಳಿ ಗೋ ಬ್ಯಾಕ್ ಮೋದಿ ಎಂದು ರಮ್ಯಾ ಟ್ವೀಟ್‌ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರತಾಪ್‌ ಸಿಂಹ, ಲೌಡ್‌ ಅಂಡ್‌ ಕ್ಲಿಯರ್‌ ಕಾಂಗ್ರೆಸ್‌ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆಗೆ  ಬೆಂಬಲ ನೀಡುತ್ತಿದೆ. ನಿಮ್ಮ ದೇಶದ್ರೋಹಿತನಕ್ಕೆ ನಾಚಿಕೆಯಾಗಬೇಕು. ಕನ್ನಡಿಗರೇ ಕರ್ನಾಟಕ ಕಾಂಗ್ರೆಸ್‌ ಬಗ್ಗೆ ಎಚ್ಚೆತ್ತುಕೊಳ್ಳಿ ಎಂದು ರಮ್ಯಾ ಅವರು ಟ್ವೀಟ್‌ ಮಾಡಿರುವ ಫೋಟೋ ಹಾಕಿ ತಿರುಗೇಟು ನೀಡಿದ್ದಾರೆ. ಜೊತೆಗೆ ರಮ್ಯಾ ಹಾಗೂ ಕಾಂಗ್ರೆಸ್‌ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದೆ. ತಮಿಳುನಾಡಿಗೆ ಪ್ರಧಾನಿ ಮೋದಿ ಹೋಗುತ್ತಿರುವುದಕ್ಕೆ ತಮಿಳಿಗರು ಗೋ ಬ್ಯಾಕ್‌ ಮೋದಿ ಚಳುವಳಿ ಮಾಡುತ್ತಿದ್ದಾರೆ. ಸಂಸದೆ ರಮ್ಯಾ ಕಬಡ ಗೋ ಬ್ಯಾಕ್‌ ಮೋದಿ ಎಂದು ಟ್ವೀಟ್‌ ಮಾಡಿ ಕನ್ನಡಿಗರ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದಾಗಿ ಇದರಿಂದಲೇ ಗೊತ್ತಾಗುತ್ತದೆ ಎಂದು ಕಿಡಿ ಕಾರಿದ್ದಾರೆ.

Leave a Reply

Your email address will not be published.