ಕೈಯಲ್ಲಿ ಫೋನ್‌, ತಲೆಮೇಲೆ ಕಲಶ ಇಟ್ಕೊಂಡು ಸರ್ಕಾರಿ ಕಚೇರಿಲಿ ಕಂಪ್ಯೂಟರ್‌ ಬಾಬಾನ ಪೂಜೆ

ಭೋಪಾಲ್‌ : ಇತ್ತೀಚೆಗಷ್ಟೇ ಮಧ್ಯಪ್ರದೇಶ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಕಂಪ್ಯೂಟರ್‌ ಬಾಬಾ ಬುಧವಾರ ಸರ್ಕಾರಿ ಅತಿಥಿ ಗೃಹದಲ್ಲಿ ಪೂಜೆ ಮಾಡಿದ್ದಾರೆ.

ಕಂಪ್ಯೂಟರ್‌ ಬಾಬಾ ಕೈಯಲ್ಲಿ ಸ್ಮಾರ್ಟ್‌ ಫೋನ್‌ ಹಿಡಿದಿದ್ದು, ತಲೆಯ ಮೇಲೆ ಕಲಶವಿಟ್ಟುಕೊಂಡು ಪೂಜೆ ನೆರವೇರಿಸಿದ್ದಾರೆ. ಈ ಪೂಜೆಯ ವೇಳೆ ಸುತ್ತಮುತ್ತ ಸಂಪೂರ್ಣ ಹೊಗೆ ತುಂಬಿಕೊಂಡಿದ್ದು, ಇದನ್ನು ನೋಡಿದ ಸಾರ್ವಜನಿಕರೊಬ್ಬರು ಫೋಟೋ ತೆಗೆದಿದ್ದಾರೆ. ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

ಮಧ್ಯಪ್ರದೇಶ ಸರ್ಕಾರದ ವಿುದ್ದ ಕಂಪ್ಯೂಟ್‌ ಬಾಬಾ ಸೆಡ್ಡು ಹೊಡೆದಿದ್ದು, ನರ್ಮದಾ ನದಿ ರಕ್ಷಿಸಲು ಸಾಧ್ಯವಾಗರ ಸರ್ಕಾರದ ವಿರುದ್ಧ ರಥಯಾತ್ರೆ ಆರಂಭಿಸುವುದಾಗಿ ಹೇಳಿದ್ದರು. ಬಳಿಕ ಕಂಪ್ಯೂಟರ್‌ ಬಾಬಾ ಸೇರಿದಂತೆ ಅನೇಕರಿಗೆ ಮಧ್ಯಪ್ರದೇಶ ಸರ್ಕಾರದಲ್ಲಿ ಕ್ಯಾಬಿನೆಟ್‌ ಸಚಿವರ ಸ್ಥಾನ ಲಭಿಸಿದ್ದು, ಬಳಿಕ ರಥಯಾತ್ರೆ ರದ್ದಾಗಿತ್ತು.

Leave a Reply

Your email address will not be published.