ಯಾವುದೇ ಕಾರಣಕ್ಕೂ ನಾನು ಶೋಭಾ ಕರಂದ್ಲಾಜೆಯನ್ನು ಸುಮ್ಮನೆ ಬಿಡಲ್ಲ : ಕೆಜೆಪಿ ಅಧ್ಯಕ್ಷ

ಚಿಕ್ಕಮಗಳೂರು : ನಾನು ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇನೆ. ತೇರದಾಳ‌ದಿಂದ‌ ಉಮಾಶ್ರೀ ವಿರುದ್ಧ ಹಾಗೂ ಯಶವಂತಪುರದಿಂದ ಶೋಭಾ ಕರಂದ್ಲಾಜೆ ವಿರುದ್ಧ ನಾನು ಸ್ಪರ್ಧೆ ಮಾಡುವುದಾಗಿ ಕೆಜೆಪಿ ಸಂಸ್ಥಾಪಕ ಪ್ರಸನ್ನ ಪದ್ಮನಾಭ ಹೇಳಿಕೆ ನೀಡಿದ್ದಾರೆ.

ನಾನೂ ಶೋಭಾ ಕರಂದ್ಲಾಜೆ ವಿರುದ್ಧ ಸ್ಪರ್ಧಿಸಿ ಗೆದ್ದೇ ಗೆಲ್ಲುತ್ತೇನೆ. ಶೋಭಾಗೆ ಟಿಕೆಟ್ ಸಿಗದಿದ್ರೆ ನಾನೂ ಕೂಡಾ ಯಶವಂತಪುರದಲ್ಲಿ ನಿಲ್ಲುವುದಿಲ್ಲ. ಶೋಭಾ ಕರಂದ್ಲಾಜೆ ನೇಪಾಳದಲ್ಲಿ ಹಂದಿ ಮೇಲೆ ಮಾಟ ಮಾಡಿಸಿ ನನ್ನನ್ನು ನಾಶ ಮಾಡಲು ಮುಂದಾಗಿದ್ದರು. ನನಗೆ ಅವರು ವೈಯಕ್ತಿಕವಾಗಿ ತೊಂದರೆ ಮಾಡಿಲ್ಲ, ಆದರೆ ನಾನು ಬೆಳೆಯದಿರಲು ಸಾಕಷ್ಟು ತೊಂದರೆ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಶೋಭಾ ಕರಂದ್ಲಾಜೆಯನ್ನು ಬಿಡೋದಿಲ್ಲ. ಈಗಾಗಲೇ 46 ಅಭ್ಯರ್ಥಿಗಳನ್ನು ಬಿಡುಗಡೆ ಮಾಡಿದ್ದೇವೆ, ಎರಡನೇ ಹಂತದ ಪಟ್ಟಿಯನ್ನು 15 ಕ್ಕೆ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.

Leave a Reply

Your email address will not be published.