CSK ಆಟಗಾರರತ್ತ ಶೂ ಎಸೆದ ಕಾವೇರಿ ಕಾರ್ಯಕರ್ತರು : ಟ್ವಿಟರ್ ನಲ್ಲಿ ಕ್ಷಮೆ ಕೋರಿದ ಫ್ಯಾನ್ಸ್

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವೆ ಮಂಗಳವಾರ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಆಟಗಾರರತ್ತ ಶೂ ಎಸೆದ ಘಟನೆ ನಡೆದಿದೆ.

ಕಾವೇರಿ ವಿವಾದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು ಪಂದ್ಯದ ವೇಳೆ ಮೈದಾನದಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಗುರಿಯಾಗಿಸಿಕೊಂಡು ಶೂ ಎಸೆದಿದ್ದಾರೆ. ಅದೃಷ್ಟವಶಾತ್ ಪ್ರೇಕ್ಷಕರು ಎಸೆದ ಶೂ ಜಡೇಜಾ ಅವರಿಗೆ ತಗಲದೇ ಪಕ್ಕದಲ್ಲಿ ಬಿದ್ದಿದೆ.

ಇದೇ ವೇಳೆ ಬೌಂಡರಿ ಗೆರೆಯತ್ತ ನಿಂತು ಆಟಗಾರರಿಗೆ ನೀರು ಸರಬರಾಜು ಮಾಡುತ್ತಿದ್ದ, ಫಾಫ್ ಡು ಪ್ಲೆಸಿಸ್ ಹಾಗೂ ಲುಂಗಿ ಎಂಗಿಡಿ ಅವರತ್ತಲೂ ಶೂ ಎಸೆಯಲಾಗಿದೆ. ಪಂದ್ಯದ ನಂತರ ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಘಟನೆಯ ಬಗ್ಗೆ ಕ್ರಿಕೆಟಿಗರ ಕ್ಷಮೆ ಕೇಳಿದ್ದಾರೆ.

ಕಾವೇರಿ ತೀರ್ಪಿನಿಂದ ತಮಗೆ ಅನ್ಯಾಯವಾಗಿದ್ದು, ಸಮಸ್ಯೆ ಬಗೆ ಹರಿಯುವವರೆಗೆ ಐಪಿಎಲ್ ಪಂದ್ಯಗಳನ್ನು ಬಹಿಸ್ಕರಿಸಲು ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಕರೆ ನೀಡಿದ್ದಾರೆ.

Leave a Reply

Your email address will not be published.