ಕಾಂಗ್ರೆಸ್‌ ತನ್ನ ತಲೆಬಿಸಿಯನ್ನು ದೇಶದ ಸಮಸ್ಯೆಯನ್ನಾಗಿ ಮಾಡುತ್ತಿದೆ : ಪ್ರಕಾಶ್ ಜಾವ್ಡೇಕರ್‌

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ವಿರುದ್ದ ರಾಜ್ಯ ಉಸ್ತುವಾರಿ ಪ್ರಕಾಶ್‌ ಜಾವ್ಡೇಕರ್‌ ಕಿಡಿ ಕಾರಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಮದ್ಯಾಹ್ನ ಬಿಸಿಯೂಟ ಕೊಟ್ಟರೇ ವಿನಃ ಶಿಕ್ಷಣದ ಬಗ್ಗೆ ಸ್ವಲ್ಪವೂ ಗಮನ ಹರಿಸಲಿಲ್ಲ ಎಂದು ಆರೋಪಿಸಿದ್ದಾರೆ.

ಅಧಿವೇಶನ ನಡೆಯದಿದ್ದರೆ ದೇಶ ಹೇಗೆ ನಡೆಯುತ್ತದೆ ಎಂದು ಪ್ರಶ್ನಿಸಿರುವ ಅವರು, ದೇಶ,ದ ಹಿತದೃಷ್ಠಿಯಿಂದ ಅಗತ್ಯ ಕಾನೂನು ತರಲು ಹೊರಟಿದ್ದೇವೆ. ಆದರೆ ಕಾಂಗ್ರೆಸ್‌ ಅದಕ್ಕೆ ಅಡ್ಡಗಾಲು ಹಾಕುತ್ತಿದೆ. ಇದು ಡೈನೆಸ್ಟಿ ಹಾಗೂ ಡೆಮಾಕ್ರಸಿ ಮಧ್ಯದ ಹೋರಾಟ ಇದು. ಅದಕ್ಕಾಗಿಯೇ ಕಾಂಗ್ರೆಸ್‌ ಸರ್ಕಾರದ ವಿರುದ್ದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದಿದ್ದಾರೆ.
ನಾವು ಕಾಂಗ್ರೆಸ್ನವರ ತರಹ ಚೋಲಾ ಬಟೂರಿ ಉಪವಾಸ ಮಾಡುವುದಿಲ್ಲ. ಗಾಂಧೀಜಿಯ ಆದರ್ಶವನ್ನಿಟ್ಟುಕೊಂಡು ಉಪವಾಸ ಮಾಡುತ್ತಿದ್ದೇವೆ. ಈ ಕಾಂಗ್ರೆಸ್‌ ಸರ್ಕಾರ ಜನರಿಗೆ ಏನು ಮಾಡಿದೆ ಎಂಬುದನ್ನು ತಿಳಿಸುತ್ತೇವೆ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದ ಬಗ್ಗೆಯೇ ಸದಾ ಯೋಚಿಸುತ್ತಿರುತ್ತದೆ. ಕಾಂಗ್ರೆಸ್‌ ತನ್ನ ತಲೆಬಿಸಿಯನ್ನು ದೇಶದ ಸಮಸ್ಯೆಯನ್ನಾಗಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published.