Pakistan : ಎದ್ದು ನಿಂತು ಹಾಡಲು ನಿರಾಕರಿಸಿದ ಗರ್ಭಿಣಿ ಗಾಯಕಿಯನ್ನು ಗುಂಡಿಟ್ಟು ಕೊಂದ ಪ್ರೇಕ್ಷಕ

ಸಂಗೀತ ಕಾರ್ಯಕ್ರಮದಲ್ಲಿ ಎದ್ದು ನಿಂತು ಹಾಡಲು ನಿರಾಕರಿಸಿದ ಏಕೈಕ ಕಾರಣಕ್ಕೆ ಗರ್ಭಿಣಿಯಾಗಿದ್ದ ಗಾಯಕಿಯನ್ನು ಪ್ರೇಕ್ಷಕನೋರ್ವ ಗುಂಡಿಟ್ಟ ಕೊಂದ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ. ಮಂಗಳವಾರ ಸಾಯಂಕಾಲ ಕಂಗಾ ಹಳ್ಳಿಯಲ್ಲಿ ಕಾರ್ಯಕ್ರಮ ನೀಡುತ್ತಿದ್ದ ವೇಳೆ 24 ವರ್ಷದ ಗಾಯಕಿ ಸಮೀನಾ ಸಮೂನ್ ಗುಂಡೇಟಿಗೆ ಬಲಿಯಾಗಿದ್ದಾಳೆ.

ಸಂಗೀತ ಕಾರ್ಯಕ್ರಮಕ್ಕೆ ಆಗಮಿಸಿದ್ದ ತಾರೀಕ್ ಅಹ್ಮದ್ ಜಟೊಯಿ ಎಂಬ ಹೆಸರಿನ ಪ್ರೇಕ್ಷಕನೊಬ್ಬ ಗಾಯಕಿ ಸಮೀನಾ ಸಮೂನ್ ಗೆ ಎದ್ದು ನಿಂತು ಹಾಡುವಂತೆ ಕೇಳಿಕೊಂಡಿದ್ದಾನೆ. 6 ತಿಂಗಳು ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಸಮೀನಾ ಎದ್ದು ನಿಂತು ಹಾಡಲು ನಿರಾಕರಿಸಿದ್ದಾರೆ.

ಇದರಿಂದ ಕುಪಿತನಾದ ಪ್ರೇಕ್ಷಕ ತನ್ನ ರಿವಾಲ್ವರ್ ಹೊರತೆಗೆದು ಹಣೆಯ ಮಧ್ಯಭಾಗಕ್ಕೆ ಗುಂಡಿಟ್ಟು ಆಕೆಯನ್ನು ಕೊಂದಿದ್ದಾನೆ. ಘಟನೆಯ ವೇಳೆ ಆರೋಪಿ ಕುಡಿದ ನಶೆಯಲ್ಲಿದ್ದನೆಂದು ಶಂಕಿಸಿರುವ ಪೋಲೀಸರು ಈತನನ್ನು ಬಂಧಿಸಿದ್ದು ತನಿಖೆ ಜಾರಿಯಲ್ಲಿದೆ.

3 thoughts on “Pakistan : ಎದ್ದು ನಿಂತು ಹಾಡಲು ನಿರಾಕರಿಸಿದ ಗರ್ಭಿಣಿ ಗಾಯಕಿಯನ್ನು ಗುಂಡಿಟ್ಟು ಕೊಂದ ಪ್ರೇಕ್ಷಕ

Leave a Reply

Your email address will not be published.

Social Media Auto Publish Powered By : XYZScripts.com