ಪಂದ್ಯದ ವೇಳೆ ನಿಂದಿಸಿದ್ದ ರಾಣಾಗೆ ಕೊಹ್ಲಿ ಕೊಟ್ಟಿದ್ದಾರೆ ಸ್ಪೆಷಲ್‌ ಉಡುಗೊರೆ !!

ಭಾನುವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ತಾನು ಬೌಲಿಂಗ್ ಮಾಡುವಾಗ ಔಟಾದ ಕೊಹ್ಲಿಯನ್ನು ರಾಣಾ ನಿಂದಿಸಿದ್ದ ವಿಡಿಯೋ ವೈರಲ್ ಆಗಿತ್ತು. ಇದಾದ ಬಳಿಕ ಕೊಹ್ಲಿ ಅಭಿಮಾನಿಗಳು ರಾಣಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಒಂದೆಡೆ ಕಿರಿಯ ಆಟಗಾರ ರಾಣಾ ಕೊಹ್ಲಿಯನ್ನು ನಿಂದಿಸಿದ ವಿಚಾರ ಎಲ್ಲೆಗೆ ಚರ್ಚೆಗೆ ಗ್ರಾಸವಾಗಿದ್ದರೆ ಮತ್ತೊಂದೆಡೆ ಕೊಹ್ಲಿ, ತನ್ನನ್ನು ಟೀಕೆ ಮಾಡಿದ ರಾಣಾಗೆ ತಮ್ಮ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ನಿಮ್ಮ ಮುಂದಿನ ಭವಿಷ್ಯ ಚೆನ್ನಾಗಿರಲಿ ಎಂದು ಶುಭ ಹಾರೈಸಿದ್ದಾರೆ.

ರಾಣಾ ತಮ್ಮ ಇನ್ಟಾಗ್ರಾಂನಲ್ಲಿ ಕೊಹ್ಲಿ ನೀಡಿದ ಬ್ಯಾಟ್‌ನ ಫೋಟೋವನ್ನು ಹಾಕಿ ಅದಕ್ಕೆ ” ದಿಗ್ಗಜರು ನಮ್ಮನ್ನು ಹೊಗಳಿದಾಗ, ನಾವು ಸರಿ ದಾರಿಯಲ್ಲೇ ಹೋಗುತ್ತಿದ್ದೇವೆ ಎಂದರ್ಥ. ಬ್ಯಾಟ್‌ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ ವಿರಾಟ್‌ ಅಣ್ಣ” ಎಂದು ಫೋಟೋ ಸಮೇತ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.

Leave a Reply

Your email address will not be published.