ಬಯಲಾಯ್ತು ನಿರ್ಮಾಪಕರ ಪುತ್ರನ ಕಾಮಪುರಾಣ : ನನ್ನನ್ನು ಆತ ಬಳಸಿಕೊಂಡಿದ್ದ ಎಂದ ಶ್ರೀರೆಡ್ಡಿ

ಕಾಸ್ಟಿಂಗ್‌ ಕೌಚ್‌ ಬಗ್ಗೆ ಸಿಡಿದೆದ್ದು ಇತ್ತೀಚೆಗಷ್ಟೇ ರಸ್ತೆ ಮೇಲೆಯೇ ಅರೆನಗ್ನಳಾಗಿ ಪ್ರತಿಭಟಸಿದ್ದ ನಟಿ ಶ್ರೀರೆಡ್ಡಿ ಈಗ ಮತ್ತೊಂದು ಕಾಮಪುರಾಣವನ್ನು ಬಯಲು ಮಾಡಿದ್ದಾರೆ.

ತೆಲುಗು ಇಂಡಸ್ಟ್ರಿಯನ್ನು ನಾಲ್ಕು ಸ್ಟಾರ್‌ ನಟರ ಕುಟುಂಬ ಆಳುತ್ತಿದೆ ಎಂದಿರುವ ಶ್ರೀರೆಡ್ಡಿ, ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ಮಾಮೂಲು ಎಂದಿದ್ದಾರೆ.

ನನ್ನ ಜೊತೆ ಅನೇಕ ನಿರ್ಮಾಪಕರು ಮಾತನಾಡಿರುವ ಆಡಿಯೋ ನನ್ನ ಬಳಿ ಇದೆ. ಅಲ್ಲದೆ ನಿರ್ಮಾಪಕನ ಮಗನೊಬ್ಬ ನನ್ನನ್ನು ಬಳಸಿಕೊಂಡಿದ್ದಾನೆ. ಸರ್ಕಾರ ನೀಡಿರುವ ಸ್ಟುಡಿಯೋದಲ್ಲಿ ನನ್ನನ್ನು ಅಸಭ್ಯವಾಗಿ ನಡೆಸಿಕೊಂಡಿದ್ದು, ಆತನ ಕಾಮದಾಹಕ್ಕೆ ನಾನು ಬಲಿಪಶುವಾಗಿದ್ದೇನೆ. ಸರ್ಕಾರ ನಿರ್ವಹಣೆ ಮಾಡಲು ಇವರಿಗೆ ನೀಡಿರುವ ಸ್ಟುಡಿಯೋ ಇಂತಹ ಕೆಲಸಗಳಿಗೆ ಬಳಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸದ್ಯದಲ್ಲೇ ಈ ಕೃತ್ಯ ಮಾಡಿರುವವರ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿರುವ ಶ್ರೀರೆಡ್ಡಿ, ಸಮಯಕ್ಕಾಗಿ ಕಾಯುತ್ತಿದ್ದೇನೆ. ಅದಕ್ಕೆ ಬೇಕಾಗಿರುವ ಸಾಕ್ಷ್ಯಗಳನ್ನು ನಾನು ಒದಗಿಸುತ್ತೇನೆ. ನನ್ನನ್ನು ಸ್ಟುಡಿಯೋಗೆ ಕರೆಸಿದ ನಿರ್ಮಾಪಕರ ಮಗ ನನ್ನೊಂದಗೆ ಸೆಕ್ಸ್ ಮಾಡುವಂತೆ ಆಗ್ರಹಿಸಿದ್ದ ಹಾಗೂ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಆತನಿಂದ ನನಗೆ ಅನ್ಯಾಯವಾಗಿದೆ. ಇಂತಹ ಕೆಲಸಗಳಿಗೆ ಸ್ಟುಡಿಯೋಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸ್ಟುಡಿಯೋಗಳನ್ನು ನಿರ್ದೇಶಕರು, ನಿರ್ಮಾಪಕರು, ಹೀರೋಗಳು ರೆಡ್‌ಲೈಟ್‌ ಏರಿಯಾದಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಭಯಾನಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com