ರೌಡಿ ಶೀಟರ್‌ಗೆ ಬಿಜೆಪಿಯಿಂದ ಟಿಕೆಟ್‌ : ಸ್ವಪಕ್ಷೀಯರಿಂದಲೇ ಭುಗಿಲೆದ್ದ ಆಕ್ರೋಶ

ಸಕಲೇಶಪುರ ಮೀಸಲು ಕ್ಷೇತ್ರಕ್ಕೆ ಶಿಸ್ತಿನ ಪಕ್ಷ ಬಿಜೆಪಿಯಿಂದ ರೌಡಿ ಶೀಟರ್ ನಾರ್ವೆ ಸೋಮಶೇಖರ್​​​ಗೆ ಟಿಕೇಟ್ ನೀಡುತ್ತಿರುವುದಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲಾತಾಣದಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ.

ಹಾಸನ ಜಿಲ್ಲೆಯಲ್ಲಿ ಸಕಲೇಶಪುರ ಕ್ಷೇತ್ರವು ಮೀಸಲು ಕ್ಷೇತ್ರವಾಗಿದ್ದು, ಬಿಜೆಪಿಯಿಂದ ರೌಡಿಶೀಟರ್ ನಾರ್ವೆ ಸೋಮಶೇಖರ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈತ ಉಪೇಂದ್ರ ಚಲನಚಿತ್ರದ ನಟಿ ದಾಮಿನಿಯ ಪತಿಯಾಗಿದ್ದು, ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ. ಶಿಸ್ತಿನ ಪಕ್ಷದಲ್ಲಿ ರೌಡಿಶೀಟರ್​​ಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗುತ್ತಿದೆ.

ಈ‌ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರೇ ನಾರ್ವೆ ಸೋಮಶೇಖರ್​​ಗೆ ಟಿಕೇಟ್ ಘೋಷಿಸಿದ್ದರು. ಆದರೆ ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ ಟಿಕೆಟ್ ನೀಡುತ್ತಿದ್ದಾರೆಂದು ಸಕಲೇಶಪುರ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಹಿರಿಯ ನಾಯಕರಿಗೆ ಕ್ಷೇತ್ರದ ಮುಖಂಡರೆಲ್ಲರೂ ದೂರು ನೀಡಲು ಮುಂದಾಗಿದ್ದಾರೆ..

ಈತನ ವಿರುದ್ದ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲು ಎಸಿಪಿ ಆಯುಕ್ತರಿಗೆ ಮನವಿ ಕಳುಹಿಸಿದ್ದಾರೆ. ಕ್ರಿಮಿನಲ್ ಹಿನ್ನೆಲೆಯುಳ್ಳ ನಾರ್ವೆ ಸೋಮಶೇಖರ್​​ನನ್ನು ಬಿಟ್ಟು ಬೇರೆ ಯಾರಿಗಾದರೂ ವರಿಷ್ಠರು ಟಿಕೇಟ್ ನೀಡಲಿ ಎಂದು ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ.

Leave a Reply

Your email address will not be published.