ನನ್ನ ಸಾವಿಗೆ ಮೋದಿ ಸರ್ಕಾರವೇ ಕಾರಣ : ಡೆತ್‌ನೋಟ್‌ ಬರೆದಿಟ್ಟು ರೈತ ಆತ್ಮಹತ್ಯೆ

ಮುಂಬೈ : ಮಹರಾಷ್ಟ್ರದ ಯವತ್ಮಾಳ ಜಿಲ್ಲೆಯ ರೈತನೊಬ್ಬ ನನ್ನ ಸಾವಿಗೆ ಮೋದಿ ಸರ್ಕಾರವೇ ಹೊಣೆ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ರೈತನನ್ನು ಶಂಕರ್‌ ಬಾಯ್‌ರಾವ್‌ ಚೇರೆ ಎಂದು ಹೆಸರಿಸಲಾಗಿದೆ. ದೇಶದಲ್ಲಿ ಅನಾವೃಷ್ಠಿಯಿಂದ ತತ್ತರಿಸಿರುವ ಯವತ್ಮಾಳ್‌ ಜಿಲ್ಲೆಯಲ್ಲಿ ರೈತರು ಬೆಳೆದಿದ್ದ ಬೆಳೆ ನಷ್ಟವಾಗಿದ್ದು, ನನ್ನ ಸಾವಿನ ಬಳಿಕವಾದರೂ ನನ್ನ ಕುಟುಂಬಕ್ಕೆ ಸಹಾಯ ಮಾಡಿ ಎಂದು ರೈತ ಪತ್ರದಲ್ಲಿ ತಿಳಿಸಿದ್ದಾನೆ.

ಮೃತ ರೈತನ ಶವವನ್ನು ಆಸ್ಪತ್ರೆಯಿಂದ ಕೊಂಡೊಯ್ಯಲು ಕುಟುಂಬಸ್ಥರು ನಿರಾಕರಿಸಿದ್ದು, ನಮ್ಮ ಕಷ್ಟ ಆಲಿಸಲು ಪ್ರಧಾನಿ ಮೋದಿ ಇಲ್ಲಿಗೆ ಬರಬೇಕು. ಇಲ್ಲವೇ ರಾಜ್ಯ ಸರ್ಕಾರ ಪರಿಹಾರ ನೀಡಬೇಕು. ಅಲ್ಲಿಯವರೆಗೂ ಶವವನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದಿದ್ದಾರೆ.

ರೈತ ಚೇರೆ ತನ್ನ 9 ಎಕರೆ ಜಮೀನಿನಲ್ಲಿ ಹತ್ತಿಯನ್ನು ಬೆಳೆದಿದ್ದ. ಸ್ಥಳೀಯ ಸರ್ಕಾರಿ ಸೊಸೈಟಿಯಿಂದ 90 ಸಾವಿರ  ಹಾಗೂ 3 ಲಕ್ಷ ರೂವನ್ನು ಕೈಸಾಲ ಪಡೆದಿದ್ದ. ಆದರೆ ಹತ್ತಿ ಬೆಳೆಗೆ ಸೋಂಕು ತಗುಲಿ ಹಾಳಾಗಿದ್ದು, ಹಣ ವಾಪಸ್‌ ಮಾಡಲು ಸಾಧ್ಯವಾಗಿರಲಿಲ್ಲ. ತನಗೆ ಸಹಾಯ ಮಾಡುವಂತೆ ಸಂಸದರು, ಶಾಸಕರು, ಸರ್ಕಾರಿ ಅಧಿಕಾರಿಗಳನ್ನು ಬೇಡಿದ್ದರು ಯಾರೂ ಸಹಾಯ ಮಾಡಿರಲಿಲ್ಲ ಎಂದು ಡೆತ್‌ ನೋಟ್‌ನಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com