ನಾವು ಯಾವುದೇ ಪಕ್ಷದ ಜೊತೆ ಅಲ್ಲ, ರಾಜ್ಯದ ಜನತೆ ಜೊತೆ ಫಿಕ್ಸಿಂಗ್‌ ಮಾಡ್ಕೊಂಡಿದ್ದೀವಿ : HDK

ಮಾಜಿ ಸಿಎಂ ಯಡಿಯೂರಪ್ಪನವರಿಗೆ ಇಷ್ಟು ದಿನ ಇಲ್ಲದ ರೈತರ ಕಾಳಜಿ ಚುನಾವಣೆ ಸಂದರ್ಭದಲ್ಲಿ ಬಂದಿದೆ. ರಾಜ್ಯ ಸರ್ಕಾರದ ಬಗ್ಗೆ ಮಾತನಾಡೋ ಬಿಎಸ್ ವೈ ತಮ್ಮ ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ಮೊದಲು ಹೇಳಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕೊಪ್ಪಳದ ಯಲಬುರ್ಗಾದಲ್ಲಿ ಮಾತನಾಡಿದ ಹೆಚ್ ಡಿಕೆ, ಕೇವಲ ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ಪಕ್ಷಕ್ಕೂ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಚನ್ನಪಟ್ಟಣದಲ್ಲಿ ಎಚ್.ಎಂ ರೇವಣ್ಣ ಅಲ್ಲ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಬಂದರೂ ನನಗೆ ಏನು ಮಾಡಲು ಸಾಧ್ಯವಿಲ್ಲ. ಸಿ.ಪಿ ಯೋಗಿಶ್ವರನ್ನು ಕಟ್ಟಿಹಾಕಲು ಕಾಂಗ್ರೆಸ್ ನವರು ಬರ್ತಾ ಇಲ್ಲ. ಬದಲಾಗಿ ನನ್ನ ಕಟ್ಟಿಹಾಕಲು ಬರ್ತಾ ಇದ್ದಾರೆ ಅದು ಅವರಿಂದ ಅಸಾಧ್ಯ ಎಂದ್ರು.  ಕೊಪ್ಪಳದ ಬಿಜೆಪಿ ಸಂಸದ ಕರಡಿ ಸಂಗಣ್ಣ ನಮ್ಮ ಜೊತೆ ಯಾವುದೇ ಸಂಪರ್ಕವಿಲ್ಲ, ಅಲ್ಲದೆ ನಮ್ಮ ಪಕ್ಷದ ಸೇರ್ಪಡೆಗಾಗಿ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ರು. ಅಲ್ಲದೆ ನಾವು ಯಾವ ಪಕ್ಷದ ಜೊತೆ ಮೈತ್ರಿಯ ಮಾತು ಇಲ್ಲ. ನಾವು ಯಾರ ಜೊತೆನೂ ಫಿಕ್ಸಿಂಗ್ ಮಾಡಿಕೊಂಡಿಲ್ಲ. ನಾವು ಆರುವರೆ ಕೋಟಿ ಜನರ ಜೊತೆ ಮಾತ್ರ ಫಿಕ್ಸಿಂಗ್ ಮಾಡಿಕೊಂಡಿದ್ದೇವೆ ಎಂದು ಆರೋಪವನ್ನು ತಳ್ಳಿಹಾಕಿದ್ರು.

Leave a Reply

Your email address will not be published.

Social Media Auto Publish Powered By : XYZScripts.com