IPL : ಕೆಕೆಆರ್ ವಿರುದ್ಧ ಚೆನ್ನೈಗೆ 5 ವಿಕೆಟ್ ಗೆಲುವು : ಮಿಂಚಿದ ಸ್ಯಾಮ್ ಬಿಲ್ಲಿಂಗ್ಸ್

ಚೆನ್ನೈನ ಚೆಪಾಕ್ ಅಂಗಳದಲ್ಲಿ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರೋಚಕ 5 ವಿಕೆಟ್ ಜಯಗಳಿಸಿದೆ. ತನ್ನ ಮೊದಲ ಎರಡು ಪಂದ್ಯಗಳಲ್ಲಿ ಜಯ ಗಳಿಸಿರುವ ಸಿಎಸ್ ಕೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.

ಮಂಗಳವಾರ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್  ಫೀಲ್ಡಿಂಗ್ ಅಯ್ದುಕೊಂಡಿತು. ಮೊದಲ ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ 20 ಓವರ್ ಗಳಲ್ಲಿ  6 ವಿಕೆಟ್ ಕಳೆದುಕೊಂಡು 202 ರನ್ ಮೊತ್ತ ಕಲೆಹಾಕಿತು. ಮಿಂಚಿನ ಬ್ಯಾಟಿಂಗ್ ನಡೆಸಿದ ಆ್ಯಂಡ್ರೆ ರಸೆಲ್ 88 ರನ್ ಗಳಿಸಿದರು.

ಬೃಹತ್ ಮೊತ್ತವನ್ನು ಚೇಸ್ ಮಾಡಲಿಳಿದ ಸಿಎಸ್ ಕೆ, 19.5 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 207 ರನ್ ಸೇರಿಸಿ ಗೆಲುವು ಪಡೆಯಿತು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಸ್ಯಾಮ್ ಬಿಲ್ಲಿಂಗ್ಸ್ 23 ಎಸೆತಗಳಲ್ಲಿ 56 ರನ್ ಬಾರಿಸಿ ಚೆನ್ನೈ ಗೆಲುವಿಗೆ ಕಾರಣರಾದರು.

Leave a Reply

Your email address will not be published.

Social Media Auto Publish Powered By : XYZScripts.com