ನನ್ನ ಬೆಂಬಲಿಗರಿಗೆ ಈ ಪಕ್ಷನೇ ಸೇರಿ ಅನ್ನಲ್ಲ, ಆದ್ರೆ BJP ವಿರೋಧಿಸಿ ಅಂತ ಹೇಳ್ತೀನಿ : ಪ್ರಕಾಶ್ ರೈ

ಬೆಳಗಾವಿ : ಪ್ರಶ್ನಿಸಿದ ನನ್ನನ್ನು ಪಾಕಿಸ್ತಾನಕ್ಕೆ ಹೋಗು ಎನ್ನುವುದು ಕೋಮುವಾದ. ಕೋಮು ವಾದದ ವಿರುದ್ಧ ಮಾತನಾಡಿದ್ರೆ ಹಿಂದು ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೋಮುವಾದ ಜಾಸ್ತಿಯಾಗಿದೆ ಎಂದು ನಟ ಪ್ರಕಾಶ್‌ ರೈ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ ಹತ್ಯೆ ಆಘಾತ ತಂದಿದೆ. ನಾಗರಿಕರ ಸಮಾಜದ ಸರಿಯಾದ ಬೆಳವಣಿಗೆ ಇದಲ್ಲ. ನಾನು ಯಾವುದೇ ಪಕ್ಷಕ್ಕೆ‌ ಸೇರಲ್ಲ. ಕಲಬುರಗಿ, ಗೌರಿ ಸೇರಿ ಎಲ್ಲಾ ಹತ್ಯೆ ಖಂಡನೀಯ ಎಂದಿದ್ದಾರೆ.

ನನ್ನನ್ನು ಬೆಂಬಲಿಸುವರಿಗೆ ಯಾವ ಪಕ್ಷ ಬೆಂಬಲಿಸಿ ಅಂತ ನಾನು ಹೇಳಲ್ಲ. ಆದರೇ ಬಿಜೆಪಿ ವಿರೋಧಿಸಿ ಅಂತ ಮಾತ್ರ ಹೇಳುತ್ತೇನೆ. ಸಂವಿಧಾನ ಬದಲಿಸಿ ಅಂಥ ಹೇಳುವವರನ್ನು ಹೇಗೆ ನಂಬಲಿ. ದೇಶದ ಸಂವಿಧಾನದ ಅಗೌರವ ತೋರಿಸಿದ್ದಾರೆ. ಸಚಿವರ ಮೇಲೆ ಕ್ರಮ ಕೈಗೊಳ್ಳದ ಪಾರ್ಟಿ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.  ಬಿಜೆಪಿ ಕ್ಯಾನ್ಸರ್, ಜೆಡಿಎಸ್, ಕಾಂಗ್ರೆಸ್ ಕೆಮ್ಮು ನೆಗಡಿ ಇದ್ದಂತೆ.   ನನ್ನ ಹೋರಾಟ ರಾಜಕೀಯ ಸ್ವರೂಪ ಪಡೆಯಲ್ಲ.
ದರೇ ಈ ರೀತಿ ಅನುಮಾನ ನಮ್ಮಲ್ಲಿ ಇರಬೇಕು ಎಂದಿದ್ದಾರೆ.

ಇನ್ನು ಕಾವೇರಿ ನದಿ ವಿಚಾರ ಸಂಬಂಧ ತಮಿಳುನಾಡಿನಲ್ಲಿ ನಟರ ಪ್ರತಿಭಟನೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಯಾವ ಪಕ್ಷ, ರಾಜಕಾರಣಿ ಕಾವೇರಿ ಸಮಸ್ಯೆ ಬಗೆಹರಿಸಲ್ಲ. ಇದು ರಾಜಕೀಯ ಉಪಯೋಗಕ್ಕೆ ಬಳಕೆಯಾಗುತ್ತಿದೆ. ಕಾವೇರಿ ಬಗ್ಗೆ ಕಾಳಜಿ ಇದ್ರೆ, ತಜ್ಞರ ಜತೆಗೆ ‌ಕುಳಿತು ರಾಜ್ಯ ಕೇಂದ್ರ ಸರ್ಕಾರ ಚಿಂತಿಸಬೇಕು. ಜಸ್ಟ್ ಆಸ್ಕಿಂಗ್ ಸಂಸ್ಥೆ ತಜ್ಞರ ಜತೆಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

13 thoughts on “ನನ್ನ ಬೆಂಬಲಿಗರಿಗೆ ಈ ಪಕ್ಷನೇ ಸೇರಿ ಅನ್ನಲ್ಲ, ಆದ್ರೆ BJP ವಿರೋಧಿಸಿ ಅಂತ ಹೇಳ್ತೀನಿ : ಪ್ರಕಾಶ್ ರೈ

Leave a Reply

Your email address will not be published.