ನೋಡುವವರ ಕಣ್ಣು ಕುಕ್ಕೋ ಸೌಂದರ್ಯ ಪಡೆಯೋಕೆ ಈ ಕೆಲ್ಸಗಳನ್ನು ಮಾಡಿ ಅಷ್ಟೇ ಸಾಕು….

ತಾನು ಚೆನ್ನಾಗಿ ಕಾಣಬೇಕು ಎಂದು ಯಾರಿಗೆ ತಾನೆ ಇಷ್ಟವಿರಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗೆ ಬ್ಯೂಟಿ ಕಾನ್ಷಿಯಸ್‌ ಸ್ವಲ್ಪ ಜಾಸ್ತೀನೆ. ಆದರೆ ಕೆಲವರು ತಮಗೆ ಟೈಮಿಲ್ಲ ಎಂಬ ಕಾರಣಕ್ಕೆ ಸೌಂದರ್ಯದ ಕಡೆ ಹೆಚ್ಚು ಗಮನ ನೀಡುವುದೇ ಇಲ್ಲ. ಆದರೆ ನಿಮ್ಮ ಸೌಂದರ್ಯ ಕಾಪಾಡಿಕೊಳ್ಳೋಕೆ ಈಗ ಹೆಚ್ಚಿನ ಸಮಯ ಬೇಕಾಗಿಲ್ಲ. ಮನೆಯಲ್ಲೇ ಮದ್ದು ಸಿದ್ಧಮಾಡಿಟ್ಕೊಂಡು ರಾತ್ರಿ ಬಳಸಿದರೆ ಸೌಂದರ್ಯ ಇಮ್ಮಡಿಯಾಗುತ್ತೆ.


ಲೋಳೆಸರದ ಪ್ಯಾಕ್‌ : ಚರ್ಮದ ಎಲ್ಲಾ ತರಹದ ತೊಂದರೆಗಳಿಗೂ ಅಲೋವೆರಾ ಬಹಲ ಉಪಯೋಗಕಾರಿ. ಮೊಡವೆ, ಸ್ಕಿನ್ ಟ್ಯಾನ್‌, ಬೆಳ್ಳಗಾಗಲು, ಮುಖದ ಮೇಲೆ ನೆರಿಗೆ ಮೂಡದಂತೆ ಮಾಡಲು ಈ ಅಲೋವೆರಾ ಮಾಸ್ಕ್‌ ಸಹಕಾರಿಯಾಗಿದೆ. ಆದ್ದರಿಂದ ಮಲಗುವ ಮುನ್ನ ಅಲೋವೆರಾದ ಮಾಸ್ಕ್‌ ಹಾಕಿಕೊಂಡು ಒಣಗಿದ ಮೇಲೆ ಮಲಗಿ, ಬೆಳಗ್ಗೆ ಎದ್ದು ಮುಖ ತೊಳೆದರೆ ಮುಖ ಫ್ರೆಶ್‌ ಆಗಿರುತ್ತದೆ. ವಾರಕ್ಕೆರಡು ಸಲ ಈ ರೀತಿ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಕಣ್ಣಿನ ಕೆಳಗಿರುವ ಕಪ್ಪು ವರ್ತುಲಕ್ಕೆ ಮಿಟಮಿನ್‌ ಇ ಮಾಸ್ಕ್‌ :

ಕಣ್ಣಿನ ಕೆಳಗಿರುವ ಚರ್ಚಮ ಸೂಕ್ಷ್ಮವಾಗಿರುತ್ತದೆ. ವಯಸ್ಸಾಗುತ್ತಿದ್ದಂತೆ ಕಣ್ಣಿನ ಸುತ್ತ ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಇದಕ್ಕೆ ಪರಿಹಾರ ಬೇಕೆಂದರೆ ಮಲಗುವ ಮುನ್ನ ಕಣ್ಣಿನ ಕೆಳಗೆ ವಿಟಮಿನ್‌ ಇ ಎಣ್ಣೆ ಹಚ್ಚಿ ಮಲಗಿ. ಬೆಳಗ್ಗೆದ್ದು ತೊಳೆಯಿರಿ. ಆದರೆ ಈ ಎಣ್ಣೆ ಹಚ್ಚುವಾಗ ಕಣ್ಣನ್ನು ಜೋಪಾನವಾಗಿ ನೋಡಿಕೊಳ್ಳಬೇಕಾಗುತ್ತದೆ. ವಾರಕ್ಕೊಮ್ಮೆ ಈ ಮಾಸ್ಕ್‌ ಹಾಕಿದರೆ ಉತ್ತಮ.


ತುಟಿಗೆ ಕೊಬ್ಬರಿ ಎಣ್ಣೆ :
ತೆಂಗಿನ ಎಣ್ಣೆ ಪರಿಣಾಮಕಾರಿ ಔಷಧವಾಗಿದೆ. ಸೌಂದರ್ಯ ವರ್ಧಕಗಳಲ್ಲಿ ತೆಂಗಿನ ಎಣ್ಣೆಗೆ ಮಹತ್ವದ ಸ್ಥಾನವಿದೆ. ಇಂತಹ ತೆಂಗಿನ ಎಣ್ಣೆಯನ್ನು ಪ್ರತಿನಿತ್ಯ ತುಟಿಗೆ ಹಚ್ಚುವುದರಿಂದ ಒಡೆದಿರುವ ತುಟಿ ಸರಿಯಾಗಿ ಮೃದುವಾಗುತ್ತದೆ. ಹಾಗೂ ಕೈ ಕಾಲುಗಳಿಗೆ ಹಚ್ಚುವುದರಿಂದ ಒಡೆತ ಕಡಿಮೆಯಾಗಿ ಮೃದುವಾಗುತ್ತದೆ.

ಕೂದಲಿಗೆ ಮಾಯ್ಸ್ಚರೈಸರ್ಸ್‌ :
ಬೆಂಗಳೂರು ಅಥವಾ ಇನ್ನಿತರ ಬ್ಯುಸಿ ಸಿಟಿಗಳಲ್ಲಿ ಓಡಾಡುವವರಿಗೆ ಕೂದಲು ಸಮಸ್ಯೆ ಇದ್ದೇ ಇರುತ್ತದೆ. ದೂಳಲ್ಲಿ, ಓಡಾಡೋದು ಅಂದ ಮೇಲೆ ಕೂದಲು ಒರಟಾಗುವುದು, ಸ್ಪ್ಲಿಟ್ ಆಗೋದು ಸಾಮಾನ್ಯ. ಇದಕ್ಕೆ ಸರಿಯಾದ ಮನೆ ಮದ್ದು ಇದೆ. ಆಪಲ್‌ ಸಿಡಾರ್‌ ಹಾಗೂ ನೀರಿನ ಸಲ್ಯೂಷನ್‌ ತಯಾರಿಸಿಕೊಂಡು ಮಲಗುವ ಮುನ್ನ ಕೂದಲಿಗೆ ಸ್ಪ್ರೇ ಮಾಡಬೇಕು. ಕೂದಲಲ್ಲಿ ತೇವಾಂಶ, ನುಣುಪಾಗಿರಬೇಕು ಎಂದರೆ ಅದಕ್ಕೆ ವ್ಯಾಸಲಿನ್‌ ಬಳಸಬೇಕು. ಕೂದಲಿನ ತುದಿಗೆ ವ್ಯಾಸಲಿನ್‌ ಹಚ್ಚುವುದರಿಂದ ಕವಲೊಡೆದ ಕೂದಲು ಸರಿಯಾಗುತ್ತದೆ.


ಒರಟು ಪಾದಕ್ಕೆ ಸ್ಕ್ರಬ್ಸ್‌ :
ಕೊಬ್ಬರಿ ಎಣ್ಣೆ ಹಾಗೂ ಆಲಿವ್‌ ಆಯಿಲ್‌ ಇದ್ದರೆ ಒರಟು ಪಾದವನ್ನು ಮೃದುಗೊಳಿಸಬಹುದು. ಮೊದಲು ಪಾದ ಹಾಗೂ ಹಿಮ್ಮಡಿಗೆ ಸ್ಕ್ರಬ್‌ ಹಾಕಿ ಮಸಾಜ್ ಮಾಡಿ ಒರೆಸಿ ಬಿಡಬೇಕು. ಬಳಿಕ ಆಲೀವ್ ಆಯಿಲ್‌ ಅಥವಾ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು. ಬಳಿಕ ಕಾಲಿಗೆ ಸಾಕ್ಸ್‌ ಹಾಕಿಕೊಂಡು ಮಲಗಿದರೆ ಕೆಲವೇ ವಾರಗಳಲ್ಲಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Leave a Reply

Your email address will not be published.