ಬೆಂಗಳೂರಿನ ಈ ದೇವಾಲಯಕ್ಕೆ ಹೋಗಲು ಚೂಡೀದಾರ್‌, ಸೀರೆಯನ್ನೇ ಧರಿಸಬೇಕಂತೆ..!

ಬೆಂಗಳೂರು : ಆರ್‌.ಆರ್‌ ನಗರದಲ್ಲಿರುವ  ರಾಜರಾಜೇಶ್ವರಿ ದೇವಾಲಯದ ಆಡಳಿತ ಮಂಡಳಿ ಹೊಸ ಡ್ರೆಸ್‌ ಕೋಡ್‌ ಜಾರಿ ಮಾಡಲಾಗಿದ್ದು, ಮಹಿಳೆಯರು ಜೀನ್ಸ್‌, ಮಿನಿ ಸ್ಕರ್ಟ್‌ ಹಾಗೂ ಸ್ಲೀವ್‌ ಲೆಸ್‌ ಡ್ರೆಸ್‌ಗಳನ್ನು ಧರಿಸಿ ದೇವಸ್ಥಾನನಕ್ಕೆ ಪ್ರವೇಶಿಸುವಂತಿಲ್ಲ ಎಂಬ ನಿಯಮ ಜಾರಿಗೆ ತಂದಿದೆ.

ದೇವಾಲಯದ ಹೊಸ ನಿಯಮದ ಪ್ರಕಾರ, ಪುರುಷರು ಧೋತಿ ಅತವಾ ಪ್ಯಾಂಟ್‌ ಧರಿಸಿ ದೇವಸ್ಥಾನದೊಳಗೆ ಬರಬಹುದು. ಇನ್ನು ಮಹಿಳೆಯರು ಸೀರೆ ಅಥವಾ ಚೂಡೀದಾರ್‌ ಧರಿಸಬೇಕು. ದುಪಟ್ಟಾ ಹೊದೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಇನ್ನು ರಬ್ಬರ್‌ ಬ್ಯಾಂಡ್‌ನಿಂದ ಕೂದಲನ್ನು ಕಟ್ಟಿಕೊಂಡಿರಬೇಕು. ಅಥವಾ ಜಡೆ ಹಾಕಿರಬೇಕು.ಬರ್ಮುಡಾ, ಶರ್ಟ್‌, ಮಿನಿ ಸ್ಕರ್ಟ್‌, ಸ್ಲೀವ್‌ ಲೆಸ್‌ ಟಾಪ್‌, ಲೋ ವೇಸ್ಟ್‌ ಜೀನ್ಸ್‌, ಶಾರ್ಟ್‌ ಲೆಂತ್‌ ಟೀ ಶರ್ಟ್‌ಗೆ ನಿಷೇಧ ಹೇರಲಾಗಿದೆ.

ಭಕ್ತರು ಭಾರತೀಯ ಸಂಸ್ಕೃತಿಯನ್ನು ಅನ ುಸರಿಸಬೇಕೆಂಬ ಕಾರಣಕ್ಕೆ ಈ ನಿಯಮ ಜಾರಿ ಮಾಡಿರುವುದಾಗಿ ದೇವಾಲಯದ ಆಡಳಿತ ಮಂಡಳಿ ಹೇಳಿದೆ.

 

Leave a Reply

Your email address will not be published.

Social Media Auto Publish Powered By : XYZScripts.com