ಅಲ್ಜೀರಿಯಾದಲ್ಲಿ ಮಿಲಿಟರಿ ವಿಮಾನ ಪತನ : 100ಕ್ಕೂ ಹೆಚ್ಚು ಮಂದಿ ಸಾವು ?

ಅಲ್ಜೀರ್ಸ್‌ : ಅಲ್ಜೀರಿಯಾದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದ್ದು, 100 ಮಂದಿ ಸಾವಿಗೀಡಾಗಿರುವ ಸಾಧ್ಯತೆ ಇರುವುದಾಗಿ ಹೇಳಲಾಗುತ್ತಿದೆ.  ಅಲ್ಜೀರಿಯಾದ ರಾಜಧಾನಿ ಅಲ್ಜೀರ್ಸ್‌ನ ಭೌಫಾರಿರ್ಕ್‌ ವಿಮಾನ ನಿಲ್ದಾಣದ ಬಳಿ ಮಿಲಿಟರಿ ವಿಮಾನ ಪತನಗೊಂಡಿದ್ದು, ಅವಗಢದಲ್ಲಿ 100 ಮಂದಿ ಸಾವಿಗೀಡಾಗಿರುವುದಾಗಿ ಹೇಳಲಾಗುತ್ತಿದೆ.

ಕೆಲ ಮೂಲಗಳ ಪ್ರಕಾರ ವಿಮಾನದಲ್ಲಿ 200ಕ್ಕೂ ಹೆಚ್ಚು ಮಂದಿ ಇದ್ದುದಾಗಿ ತಿಳಿದುಬಂದಿದೆ. 14ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಏರ್‌ಪೋರ್ಟ್‌ ಸಮೀಪವಿರುವ ಎಲ್ಲಾ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

 

One thought on “ಅಲ್ಜೀರಿಯಾದಲ್ಲಿ ಮಿಲಿಟರಿ ವಿಮಾನ ಪತನ : 100ಕ್ಕೂ ಹೆಚ್ಚು ಮಂದಿ ಸಾವು ?

Leave a Reply

Your email address will not be published.

Social Media Auto Publish Powered By : XYZScripts.com