ಮತ್ತೆ ಕುಟುಂಬ ರಾಜಕಾರಣದತ್ತ HDD : ರಾಜಕೀಯಕ್ಕೆ ಎಂಟ್ರಿ ಕೊಟ್ಟ ದೇವೇಗೌಡರು ಪುತ್ರಿ ?

ಬೆಂಗಳೂರು : ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ದವಾಗಿದೆ. ಕೆ.ಆರ್‌ ಪೇಟೆಯಲ್ಲಿ ನಾರಾಯಣಗೌಡರ ಬದಲಾಗಿ ದೇವೇಗೌಡರ ಪುತ್ರಿ ಅನಸೂಯ ಅವರಿಗೆ ಟಿಕೆಟ್‌ ನೀಡುವಂತೆ ಜೆಡಿಎಸ್‌ ಕಾರ್ಯಕರ್ತರು ಒತ್ತಾಯಿಸಿರುವುದಾಗಿ ತಿಳಿದುಬಂದಿದೆ.
ಹೌದು ಚುನಾವಣಾ ಹೊತ್ತಲ್ಲೇ ಕೆ.ಆರ್‌ ಪೇಟೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮಾಜಿ ಪ್ರಧಾನಿ ದೇವೇಗೌಡರ ಮಗಳು ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಹೇಳಲಾಗುತ್ತಿದೆ. ಈ ಸಂಬಂಧ ಕಾರ್ಯಕರ್ತರು ಬೆಂಗಳೂರಿನಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಕೆ.ಆರ್‌ ಪೇಟೆಯಿಂದ ಅನಸೂಯ ಅವರನ್ನು ಕಣಕ್ಕಿಳಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಈ ಬಗ್ಗೆ ದೇವೇಗೌಡರು ಇದುವರೆಗೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ. ಈ ಹಿಂದೆಯೂ ಅನುಸೂಯ ಕೃಪೆಯಿಂದಲೇ ಟಿಕೆಟ್ ಪಡೆದು ನಾರಾಯಣ ಗೌಡ ಶಾಸಕರಾಗಿದ್ದರು. ಆದರೆ ಈ ಬಾರಿ ನಾರಾಯಣ ಗೌಡ ಅವರ ಬದಲಿಗೆ ಅನಸೂಯ ಅವರನ್ನೇ ಕಣಕ್ಕಿಳಿಸಲು ಕಾರ್ಯಕರ್ತರು ಚಿಂತಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com