ಅವರಪ್ಪನ ಮೇಲೆ ಆಣೆ ಹಾಕಲ್ಲ, ನಮ್ಮಪ್ಪನಾಣೆ JDS ಅಧಿಕಾರಕ್ಕೆ ಬರಲ್ಲ : ಜಮೀರ್ ಆಹ್ಮದ್‌

ಚಿತ್ರದುರ್ಗ : ಸಿಎಂ ಸಿದ್ದರಾಮಯ್ಯ ಪದೇ ಪದೇ ಅವರಪ್ಪನಾಣೆ ಎಂದಿದ್ದಕ್ಕೆ ಎಚ್‌ಡಿಕೆ ಸಿಟ್ಟಾಗಿದ್ದರು. ಆದರೆ ಈಗ ನಾನು ನಿಮ್ಮಪ್ಪನ ಮೇಲೆ ಆಣೆ ಹಾಕಲ್ಲ. ನಮ್ಮಪ್ಪನಾಣೆ ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.
ಹಿರಿಯೂರಿನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಸೆಕ್ಯುಲರ್‌ ಪಕ್ಷ ಅಲ್ಲವೇ ಅಲ್ಲ. ಕುಮಾರಸ್ವಾಮಿ ಅವರಲ್ಲಿ ಶೇ10ರಷ್ಟೂ ಜಾತ್ಯಾತೀತ ಅಂಶಗಳಿಲ್ಲ. ಈ ಚುನಾವಣೆಲಿ 115 ಸೀಟ್ ಜೆಡಿಎಸ್‌ಗೆ ಬಂದರೆ ನಮ್ಮ ತಾಯಾಣಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ, ಜೊತೆಗೆ ರಾಜ್ಯಬಿಟ್ಟು ಹೋಗುತ್ತೇನೆ ಎಂದಿದ್ದಾರೆ.
ಕುಮಾರಸ್ವಾಮಿ ಸಿದ್ದರಾಮಯ್ಯ ಕಂಡ್ರೆ ಭಯ. ಅದಕ್ಕೆ ಪದೇ ಪದೇ ಟೀಕೆ ಮಾಡುತ್ತಿರುತ್ತಾರೆ. ಹಾಗಾಗಿಯೇ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com