ಬಿಜೆಪಿ ನಾಯಕರ ಬಾಯಿಗೆ ಆಹಾರವಾದ ಕಾಂಗ್ರೆಸ್‌ ಮುಖಂಡರ ಉಪವಾಸ ಸತ್ಯಾಗ್ರಹ !

ದೆಹಲಿ : ದೇಶಾದ್ಯಂತ ಕೋಮುವಾದ ಹೆಚ್ಚುತ್ತಿದ್ದು, ಕೇಂದ್ರ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಸೋಮವಾರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಸತ್ಯಾಗ್ರಹ ಬಿಜೆಪಿಯ ಬಾಯಿಗೆ ಆಹಾರವಾಗಿದ್ದು, ಕಾಂಗ್ರೆಸ್‌ ನಾಯಕರನ್ನು ವ್ಯಂಗ್ಯ ಮಾಡಿದ್ದಾರೆ.
ಕಾಂಗ್ರೆಸ್‌ ಮುಖಂಡರು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಕ್ಕೂ ಮುನ್ನ ಪೂರಿ, ಸಾಗು ಸೇವಿಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್‌ಗೆ ತೀವ್ರ ಮುಜುಗರ ಉಂಟು ಮಾಡಿದೆ. ಜೊತೆಗೆ ಬಿಜೆಪಿ ಬಾಯಿಗೆ ಇದು ಆಹಾರವಾದಂತಾಗಿದ್ದು, ಬಿಜೆಪಿಗರು ಕಾಂಗ್ರೆಸನ್ನು ಲೇವಡಿ ಮಾಡಿದ್ದಾರೆ.
ದಲಿತರ ವಿಚಾರದಲ್ಲಿ ಕಾಂಗ್ರೆಸ್‌ ದೊಡ್ಡ ನಾಟಕವಾಡುತ್ತಿದೆ. ಇದೊದು ದೊಡ್ಡ ಜೋಕ್‌ ಎಂದು ಕುಚೋದ್ಯ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com