ಬಿನ್ನಿ ಪತ್ನಿಯನ್ನು ‘Dinner Date’ ಗೆ ಕರೆದ ಅಭಿಮಾನಿ : ಮಯಂತಿ ಲ್ಯಾಂಗರ್ ಕೊಟ್ಟ ಉತ್ತರವೇನು..?

ರಾಜಸ್ಥಾನ ರಾಯಲ್ಸ್ ತಂಡದ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಅವರ ಪತ್ನಿ ಮಯಂತಿ ಲ್ಯಾಂಗರ್ ಖ್ಯಾತ ಟಿವಿ ನಿರೂಪಕಿಯರಲ್ಲಿ ಒಬ್ಬರು. ಪ್ರಸಕ್ತ ನಡೆಯುತ್ತಿರುವ 11ನೇ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿಯೂ ಮಯಂತಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಸೋಮವಾರ ತರಲೆ ಅಭಿಮಾನಿಯೊಬ್ಬ ತನ್ನ ಜೊತೆ ಡಿನ್ನರ್ ಡೇಟ್ ಗೆ ಬರುವಂತೆ ಮಯಂತಿಯನ್ನು ಆಹ್ವಾನಿಸಿದ್ದಾನೆ. ಅಭಿಮಾನಿಯ ಈ ಕೀಟಲೆಗೆ ಮಯಂತಿ ಲ್ಯಾಂಗರ್ ಟ್ವೀಟ್ ಮೂಲಕವೇ ಸರಿಯಾಗಿ ಉತ್ತರ ನೀಡಿದ್ದಾರೆ.

ಪ್ರತಿಕ್ರಿಯೆ ನೀಡಿರುವ ಮಯಂತಿ ‘ ನಾನು ಹಾಗೂ ನನ್ನ ಪತಿ ಜೊತೆಯಾಗಿ ನಿನ್ನೊಂದಿಗೆ ಡಿನ್ನರ್ ಡೇಟ್ ಗೆ ಬರುತ್ತೇವೆ ‘ ಎಂದು ಟ್ವೀಟ್ ಮಾಡಿದ್ದಾರೆ. ಸ್ಟುವರ್ಟ್ ಬಿನ್ನಿ ಪತ್ನಿಯ ಫನ್ನಿ ಉತ್ತರಕ್ಕೆ ನೆಟ್ಟಿಗರು ನಕ್ಕು ಸುಸ್ತಾಗಿದ್ದಾರೆ.

Leave a Reply

Your email address will not be published.