ಯಡಿಯೂರಪ್ಪ ಪ್ರತಿಕೃತಿಗೆ ಚಪ್ಪಲಿಯಿಂದ ಥಳಿಸಿ ಬಿಜೆಪಿಗರ ಆಕ್ರೋಶ…!

ಬೈಲಹೊಂಗಲ : ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಬೀದಿಗೆ ಇಳಿದು ಬಿ.ಎಸ್. ವೈ ಪ್ರತಿಕೃತಿ ದಹಿಸಿರೋ ಘಟನೆ ಬೈಲಹೊಂಗದಲ್ಲಿ ನಡೆದಿದೆ. ಬೈಲಹೊಂಗದಲ್ಲಿ ಹಾಲಿ ಶಾಸಕ ವಿಶ್ವನಾಥ ಪಾಟೀಲ್, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಇಬ್ಬರು ಪ್ರಬಲ ಆಕಾಂಕ್ಷಿಗಳಿದ್ದರು. ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕ ವಿಶ್ವನಾಥ ಪಾಟೀಲ್ ಟಿಕೆಟ್ ಘೋಷಣೆಯಾಗಿದೆ. ಇದರಿಂದ ಜಗದೀಶ ಮೆಟ್ಟಗುಡ್ಡ ಬೆಂಬಲಿಗರು ಸಭೆ ನಡೆಸಿದ್ದಾರೆ. ಸಭೆಯ ಬಳಿಯ ಮೆಟಗುಡ್ಡ ಮನೆಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ ವರೆಗೆ ಬೃಹತ್ ಮೆರವಣಿಗೆ ನಡೆಸಲಾಗಿದ್ದು, ಈ ವೇಳೆ ಯಡಿಯೂರಪ್ಪ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶ ಹೊರ ಹಾಕಿದ್ರು. ನೀತಿ ಸಂಹಿತಿ ಜಾರಿಯಲ್ಲಿ ಇದ್ರು ಯಾವುದೇ ಅನುಮತಿ ಇಲ್ಲದೇ ನಗರದಲ್ಲಿ ದೀಢೀರ ಧರಣಿಯನ್ನು ಮೆಟಗುಡ್ಡ ಬೆಂಬಲಿಗರು ನಡೆಸಿದ್ರು. ಇನ್ನೂ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿ ಎಸ್ ಯಡಿಯೂರಪ್ಪ ಪ್ರತಿಕೃತಿ ದಹಿಸಿದ್ದಾರೆ. ಆದರೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಜಗದೀಶ ಮೆಟಗುಡ್ಡ ಮುಂದಿನ ನಿರ್ಧಾರ ಎನು ಎಂಬುದು ಇನ್ನೂ ನಿಗೂಢವಾಗಿದೆ. ಜಗದೀಶ ಮೆಟಗುಡ್ಡ ಕಳೆದ ಭಾರೀ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಹಾಲಿ ಶಾಸಕ ವಿಶ್ವನಾಥ ಪಾಟೀಲ್ ಕೆಜೆಪಿಯಿಂದ ಆಯ್ಕೆಯಾಗಿ ನಂತರ ಬಿಜೆಪಿ ಸೇರಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com