BJP ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌ ಬಗ್ಗೆ BSY ಹೇಳಿದ್ದೇನು ?

ಬೆಂಗಳೂರು : ರಾಜ್ಯದ ಚುನಾವಣೆಗೆ ಮೊದಲ ಹಂತದ 72 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದೇವೆ. ಪಟ್ಟಿ ಬಿಡುಗಡೆ ಬಳಿಕ ಬಿಜಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿ ಆಯ್ಕೆ ಪಟ್ಟಿ ಪ್ರಕಟ ಬಳಿಕ ಯಾರಾದ್ರೂ ಆಕಸ್ಮಾತ್ ಆಗಿ ಅಸಮಾಧಾನಗೊಂಡಿದ್ದರೆ ಅಂತಹವರನ್ನು ಕರೆದು ಮಾತನಾಡುತ್ತೇವೆ. ಇನ್ನು ಏಪ್ರಿಲ್ 11ರಂದು 60ರಿಂದ 70 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಏಪ್ರಿಲ್ 19ರಂದು ನಾನು ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಸಂಸದರಿಗೆ ವಿಧಾನಸಭಾ ಚುನಾವಣಾ ಟಿಕೆಟ್ ಇಲ್ಲ. ಶೋಭಾ ಕರಂದ್ಲಾಜೆಗೂ ಕೂಡಾ ಟಿಕೆಟ್ ಇಲ್ಲ. ಶ್ರೀರಾಮುಲುಗೆ ವಿಶೇಷ ಕಾರಣಗಳಿಗಾಗಿ ವಿಧಾನಸಭೆ ಟಿಕೆಟ್ ನೀಡಲಾಗಿದೆ. ಇನ್ನುಳಿದಂತೆ ಸಂಸದರಿಗೆ ವಿಧಾನಸಭಾ ಟಿಕೆಟ್ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟಪಡಿಸಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com