ಸಾರ್ವಜನಿಕರ ಗಮನಕ್ಕೆ : ಏಪ್ರಿಲ್‌ 12ರಂದು ಕರ್ನಾಟಕ ಬಂದ್ ಇಲ್ಲ

ಬೆಂಗಳೂರು : ಏಪ್ರಿಲ್‌ 12ರಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ ನಿರ್ಧಾರದಿಂದ ವಾಟಾಳ್‌ ನಾಗರಾಜ್‌ ಹಿಂದೆ ಸರಿದಿದ್ದು. ಬಂದ್‌ ಬದಲಿಗೆ ರಾಜಭವನ ಮುತ್ತಿಗೆ ಹಾಕಿ ಕೇಂದ್ರ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್‌ ನಾಗರಾಜ್‌, ಎಂದಿಗೂ ಕಾವೇರಿ ನಿರ್ವಹಣಾ ಮಂಡಳಿ ರಚೆನೆಯನ್ನು ನಾವು ಒಪ್ಪುವುದಿಲ್ಲ. ಸುಪ್ರೀಂಕೋರ್ಟ್‌ ನಿರ್ವಹಣಾ ಮಂಡಳಿ ರಚಿಸುವಂತೆ ಹೇಳಿಲ್ಲ. ರಜಿನೀಕಾಂತ್‌, ಕಮಲ್‌ ಹಾಸನ್‌ ನಂತಹವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾವೇರಿ ವಿಚಾರ ಕೆದಕಬಾರದು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com