ಭಾರತೀಯ ಯೋಧರು ಮಾನವ ಗುರಾಣಿಯಾಗಿ ಬಳಸಿಕೊಂಡಿದ್ದ ವ್ಯಕ್ತಿಗೆ ಗ್ರಾಮದಿಂದ ಬಹಿಷ್ಕಾರ !

ಶ್ರೀನಗರ : ಕಳೆದ ವರ್ಷ ಭಾರತೀಯ ಸೇನಾ ಪಡೆಯ ಯೋಧರು ಕಲ್ಲುತೂರಾಟಗಾರರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಫಾರೂಕ್‌ ಅಹ್ಮದ್‌ ಎಂಬಾತನನ್ನು ಮಾನವ ಗುರಾಣಿಯನ್ನಾಗಿ ಮಾಡಿಕೊಂಡಿದ್ದರು. ಈ ವ್ಯಕ್ತಿ ಈಗ ಬೀದಿಗೆ ಬಿದ್ದಿದ್ದು, ಗ್ರಾಮದಿಂದಲೇ ಆತನನ್ನು ಬಹಿಷ್ಕಾರ ಹಾಕಿದ್ದಾರಂತೆ.
ಹೌದು ಕಳೆದ ವರ್ಷ ಆ ಘಟನೆ ನಡೆದ ದಿನದಿಂದ ತನ್ನನ್ನು ಎಲ್ಲರೂ ಸರ್ಕಾರಿ ಏಜೆಂಟ್‌ ಎಂಬಂತೆ ನೋಡುತ್ತಿದ್ದಾರೆ. ನನಗೆ ಯಾರೂ ಕೆಲಸ ನೀಡುತ್ತಿಲ್ಲ. ನನ್ನ ಜೀವನ ನಿರ್ವಹಣೆಯೇ ಕಷ್ಟವಾಗಿದೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾನೆ.


ಕಳೆದ ವರ್ಷ ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ವೇಳೆ ಅಲ್ಲಿದ್ದ ಫಾರೂಕ್‌ ಧರ್‌ನನ್ನು ಹಿಡಿದು ತಮ್ಮ ಜೀಪಿಗೆ ಗುರಾಣಿಯಾಗಿ ಕಟ್ಟಿಕೊಂಡು ಎಚ್ಚರಿಕೆ ನೀಡಿದ್ದರು. ಈ ಘಟನೆ ಕೇವಲ ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.


ಈ ಘಟನೆ ಬಳಿಕ ಫಾರೂಕ್‌ನನ್ನು ಗ್ರಾಮದ ಜನ ಸರ್ಕಾರದ ಏಜೆಂಟ್ ಎಂದು ನಂಬಿದ್ದು, ತನಗೆ ಯಾರೂ ಕೆಲಸ ನೀಡುತ್ತಿಲ್ಲ. ಇದನ್ನು ಯೋಚಿಸಿ ಯೋಚಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದೇನೆ. ಔಷಧಿ ತರಲು ನನಗೆ ಕಷ್ಟವಾಗುತ್ತಿದ. ಕನಿಷ್ಟ ಪಕ್ಷ ದಿನಗೂಲಿ ಮಾಡಲು ಅವಕಾಶ ನೀಡುತ್ತಿಲ್ಲ. ಘಟನೆ ನಡೆದ ದಿನ ಚುನಾವಣೆ ಇತ್ತು. ಆದರೆ ನನ್ನೂರಿನ ಜನ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಆದರೆನಾನುನ ನನ್ನ ಮತ ಚಲಾಯಿಸಲು ಹೋಗಿದ್ದೆ. ಆದರೆ ನನ್ನನ್ನೂ ಕಲ್ಲುತೂರಾಟಗಾರ ಎಂದುಕೊಂಡು ಜೀಪಿಗೆ ಕಟ್ಟಿ ಎಳೆದು ತಂದರು ಇದರಲ್ಲಿ ನನ್ನ ತಪ್ಪೇನು ಇಲ್ಲ. ಈಗ ನನ್ನನ್ನು ಗ್ರಾಮದಿಂದಲೂ ಬಹಿಷ್ಕಾರ ಹಾಕಿರುವುದಾಗಿ ಹೇಳಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com