ಟಿಕೆಟ್‌ ಸಿಗದ್ದಕ್ಕೆ ಆಕ್ರೋಶ : ನನ್ನ ಶ್ರಮಕ್ಕೆ BJP ಕೊಟ್ಟ ಬಹುಮಾನ ಇದೇನಾ ಎಂದ ಅಪ್ಪಾಸಾಹೇಬ

ವಿಜಯಪುರ : ಬಸನಗೌಡ ಪಾಟೀಲ್ ಯತ್ನಾಳ್‌ಗೆ ಟಿಕೆಟ್ ಘೋಷಣೆ ಹಿನ್ನೆಲೆ ಮತ್ತೆ ಆಕ್ರೋಶ ಭುಗಿಲೆದ್ದಿದೆ. ವಿಜಯಪುರದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷ ನನಗೆ ಟಿಕೇಟ್ ನೀಡುತ್ತದೆ ಎಂಬ ಭರವಸೆ ಇತ್ತು, ನನಗೆ ಸ್ಪರ್ಧಿಸುವ ಆಸೆ ಇತ್ತು. ಆದ್ರೆ ಕೊನೆಯ ಹಂತದಲ್ಲಿ ಬೇರೆಯವರ ಹೆಸರು ಘೋಷಣೆ ಆಗಿದೆ. ಇದರಿಂದ ನನಗೂ ಹಾಗೂ ಕಾರ್ಯಕರ್ತರಿಗೂ ನೋವಾಗಿದೆ.ನಿಷ್ಠೆಯಿಂದ ದುಡಿದಿದ್ದರಿಂದ ಪಕ್ಷ ನನಗೆ ಕೊಟ್ಟ ಬಹುಮಾನ ಇದು. ಗೆಲ್ಲುವ ಸಮಯದಲ್ಲಿ ಪಕ್ಷ ಹೀಗೆ ಮಾಡಿದ್ದು ನನಗೆ ಆಘಾತವಾಗಿದೆ. ಪಕ್ಷ ಬಿಡುವ ಮನಸ್ಸು ನನಗಿಲ್ಲ, ನಾನು ಯೋಚಿಸಿ ಮೂರು ದಿನದಲ್ಲಿ ಒಂದು ನಿರ್ಧಾರಕ್ಕೆ ಬರುತ್ತೇನೆ ಎಂದಿದ್ದಾರೆ.
ಪಕ್ಷ ಟಿಕೇಟ್ ಯಾಕೆ ಕೊಟ್ಟಿಲ್ಲ ಎಂದು ಗೊತ್ತಾಗಿಲ್ಲ. ವಿಜಯಪುರದಲ್ಲೆ ನನಗೆ ಟಿಕೇಟ್ ಕೊಡುವ ಭರವಸೆ ಇತ್ತು.ನನ್ನ ರಾಜಕಾರಣ ವಿಜಯಪುರದಿಂದ ಹಾಗೂ ಬಿಜೆಪಿಯಿಂದಲೇ ಆರಂಭವಾಗಿದೆ. ಬಿಜೆಪಿ ಪಕ್ಷದ ನಾಯಕರ ನಿರ್ಧಾರದಲ್ಲಿ ಹೆಚ್ಚು ಕಡಿಮೆ ಆಗಿರಬಹುದು, ಆದ್ರೆ ಬಿಜೆಪಿ ನನ್ನ ತಾಯಿ ಇದ್ದಂತೆ. ವಿಧಾನಸಭೆಗೆ ಅಪೇಕ್ಷಿತ ಅಭ್ಯರ್ಥಿ ಆಗಿದ್ದವನು ನಾನು, ಆದ್ರೆ ಹಿರಿಯ ನಾಯಕರು ಯಾಕೆ ಈ ತೀರ್ಮಾನ ಮಾಡಿದ್ರು ಗೊತ್ತಿಲ್ಲ.ನಾನು ನನ್ನ ಸ್ವಂತ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಪಕ್ಷಕ್ಕೆ ಹೋಗುವುದಕ್ಕಿಂತ, ಕಾರ್ಯಕರ್ತರ ಅಭಿಪ್ರಾಯ ಮುಖ್ಯ. ಕಾರ್ಯಕರ್ತರು ನನ್ನನ್ನು ನಾಯಕ ಎಂದು ಒಪ್ಪಿಕೊಂಡಿದ್ದಾರೆ, ಅದನ್ನು ರಾಷ್ಟ್ರೀಯ ನಾಯಕರು ಗುರುತಿಸಬೇಕಿದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com