ದಾಂಪತ್ಯಕ್ಕೆ ಕಾಲಿಟ್ಟ IAS ಟಾಪರ್ ಟೀನಾ ಡಾಬಿ : 2ನೇ ರ‍್ಯಾಂಕ್‌ ಪಡೆದ ಅಮೀರುಲ್ ಜೊತೆ ವಿವಾಹ

2015 ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದು ತೇರ್ಗಡೆಯಾಗಿದ್ದ ಟೀನಾ ಡಾಬಿ ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದೇ ವರ್ಷ ದೇಶಕ್ಕೆ 2ನೇ ರ್ಯಾಂಕ್ ಪಡೆದು ತೇರ್ಗಡೆ ಹೊಂದಿದ್ದ ಅಥರ್ ಅಮೀರ್ ಖಾನ್ ಅವರನ್ನು ಟೀನಾ ಮದುವೆಯಾಗಿದ್ದಾರೆ.

ರಾಜಸ್ಥಾನದ ಅಜ್ಮೇರ್ ನಲ್ಲಿ ಸೇವೆ ಸಲ್ಲಿಸುತ್ತಿರುವ 24 ವರ್ಷದ ಟೀನಾ, ಅಥರ್ ಅಮೀರ್ ಖಾನ್ ಅವರೊಂದಿಗೆ ಶನಿವಾರ ದಕ್ಷಿಣ ಕಾಶ್ಮೀರದ ಪಹಲ್ ಗಾಮ್ ನಲ್ಲಿ ವಿವಾಹವಾಗಿದ್ದಾರೆ. ಮದುವೆ ಸಮಾರಂಭಕ್ಕೆ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರು ಆಗಮಿಸಿದ್ದರು.

Image result for tina dabi

ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಿಂದ ಪದವಿ ಪಡೆದ ಟೀನಾ ಡಾಬಿ ಮೊದಲ ಪ್ರಯತ್ನದಲ್ಲೇ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗಿದ್ದರು. ಅಥರ್ ಅಮೀರ್ ಖಾನ್ 2015 ರಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದರು.

ಅಧಿಕಾರ ಸ್ವೀಕರಿಸುವ ಮುನ್ನ ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

 

Leave a Reply

Your email address will not be published.

Social Media Auto Publish Powered By : XYZScripts.com