IPL 2018 : ಕೆಕೆಆರ್ ತಂಡಕ್ಕೆ 4 ವಿಕೆಟ್ ಗೆಲುವು : ಮೊದಲ ಪಂದ್ಯದಲ್ಲಿ RCB ಗೆ ನಿರಾಸೆ

ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 4 ವಿಕೆಟ್ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡುವ ಕನಸು ಹೊಂದಿದ್ದ ಆರ್ ಸಿಬಿ ನಿರಾಸೆ ಅನುಭವಿಸಿದೆ.

ಟಾಸ್ ಗೆದ್ದ ಕೆಕೆಆರ್ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಲಿಳಿದ ಆರ್ ಸಿಬಿ 20 ಓವರುಗಳಲ್ಲಿ 176 ರನ್ ಮೊತ್ತ ಕಲೆಹಾಕಿತು. ಬ್ರೆಂಡನ್ ಮೆಕ್ಕಲಂ 43, ಎಬಿ ಡಿವಿಲಿಯರ್ಸ್ 44 ಹಾಗೂ ಮಂದೀಪ್ ಸಿಂಗ್ 37 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ಕೆಕೆಆರ್ 18.5 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಸೇರಿಸಿ ಜಯ ಪಡೆಯಿತು. ಕೇವಲ 19 ಎಸೆತಗಳಲ್ಲಿ 50 ರನ್ ಬಾರಿಸಿದ ಸುನಿಲ್ ನರೈನ್ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.

 

Leave a Reply

Your email address will not be published.

Social Media Auto Publish Powered By : XYZScripts.com