ಸಚಿವ ಮಂಜು ವಿರುದ್ದ ಮತ್ತೆ ಸಿಡಿದೆದ್ದ ಹಾಸನ DC ರೋಹಿಣಿ ಸಿಂಧೂರಿ

ಹಾಸನ : ಹಾಸನ ಉಸ್ತುವಾರಿ ಸಚಿವ ಮಂಜು ವಿರುದ್ಧ ಡಿಸಿ ರೋಹಿಣಿ ಸಿಂಧೂರಿ ತಿರುಗಿಬಿದ್ದಿದ್ದಾರೆ. ನೀತಿ‌ ಸಂಹಿತೆ ಉಲ್ಲಂಘನೆ ಆರೋಪ ಹಿನ್ನೆಲೆಯಲ್ಲಿ ಸಚಿವ ಎ.ಮಂಜುಗೆ ಮತ್ತೊಂದು ನೋಟೀಸ್ ಜಾರಿ ಮಾಡಿದ್ದಾರೆ. ಎರಡು ದಿನಗಳಲ್ಲಿ ಉತ್ತರ‌ ನೀಡುವಂತೆ ಸೂಚನೆ ನೀಡಲಾಗಿದೆ.
ಉಸ್ತುವಾರಿ ಸಚಿವ ಮಂಜು, ನೀತಿ ಸಂಹಿತೆ ಜಾರಿಯಾದ ಬಳಿಕ ಬಗರ್ ಹುಕುಂ ಸಾಗುವಳಿದಾರರ ಸಕ್ರಮಕ್ಕೆ ಅಂಕಿತ ಹಾಕಿದ್ದರು. ಅಲ್ಲದೆ ಸಭೆ ನಡೆಸದೆ 800ಕ್ಕೂ ಅಧಿಕ ಅರ್ಜಿಗಳ ವಿಲೇವಾರಿ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಅರ್ಜಿಗಳನ್ನ‌ ತಿದ್ದಿ, ಅನರ್ಹರಿಗೆ ಸಾಗುವಳಿ ಚೀಟಿ‌ ನೀಡಿರೊ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಅರಕಲಗೂಡು ತಹಸಿಲ್ದಾರ್ ಪ್ರಸನ್ನ ಮೂರ್ತಿ ಹಾಗು ಸಚಿವ ಎ.ಮಂಜುಗೆ ನೋಟೀಸ್ ಜಾರಿಮಾಡಲಾಗಿದೆ.

Leave a Reply

Your email address will not be published.