ಫಸಲಿಗೆ ಬಂದಿದ್ದ ಅಡಿಕೆ ಮರವನ್ನು ಕತ್ತರಿಸಿದ ದುಷ್ಕರ್ಮಿಗಳು :ಮುಗಿಲು ಮುಟ್ಟಿದ ರೈತನ ಆಕ್ರಂದನ

ದಾವಣಗೆರೆ : ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕಡಿದುಹಾಕಿರುವ ಅಮಾನವೀಯ ಘಟನೆ ದಾವಣಗೆರೆಯ ಹುಣಸೇಕಟ್ಟೆ ಗ್ರಾಮದಲ್ಲಿ ನಡೆದಿದೆ.

ಶೇಖರಯ್ಯ ಎಂಬುವವರ ತೋಟದಲ್ಲಿ ಘಟನೆ ನಡೆದಿದ್ದು, ಫಸಲಿಗೆ ಬಂದಿದ್ದ 300ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದುಹಾಕಲಾಗಿದೆ.

ಶೇಖರಯ್ಯ ಅವರ ಮೇಲೆ ಸೇಡು ತೀರಿಸಿಕೊಳ್ಳಲು ದುಷ್ಕರ್ಮಿಗಳು ರಾತ್ರಿಯ ವೇಳೆ ತೋಟಕ್ಕೆ ಬಂದು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ಮರಗಳನ್ನು ನಾಶಮಾಡಿದ್ದಾರೆ. ಇನ್ನೇನು ಫಸಲು ಕೈಗೆ ಬರುತ್ತದೆ ಎಂದುಕೊಂಡಿದ್ದ ರೈತ ಶೇಖರಯ್ಯ ಕಂಗಾಲಾಗಿದ್ದು, ರೈತನ ಆಕ್ರಂದನ ಮುಗಿಲು ಮುಟ್ಟಿದೆ.

ದಾವಣಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com