CWG 2018 : ಶೂಟಿಂಗ್ : ಚಿನ್ನ ಗೆದ್ದ ಜೀತು ರಾಯ್ , ಓಂ ಮಿಥಾರ್ವಲ್ ಗೆ ಕಂಚು

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್  ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೆರಡು ಪದಕಗಳು ಒಲಿದಿವೆ. ಸೋಮವಾರ ನಡೆದ ಪುರುಷರ 10 ಮೀಟರ್ ಏರ್ ಪಿಸ್ಟಲ್ ಶೂಟಿಂಗ್ ನಲ್ಲಿ ಭಾರತದ ಜೀತು ರಾಯ್ ಬಂಗಾರದ ಪದಕವನ್ನು ಗೆದ್ದಿದ್ದಾರೆ.

ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಲಿದ 8ನೇ ಚಿನ್ನ ಇದಾಗಿದೆ. ಭಾರತದ ಮತ್ತೋರ್ವ ಶೂಟರ್, ಓಂ ಮಿಥಾರ್ವಲ್ ಪುರುಷರ 10 ಮೀಟರ್ ಏರ್ ಪಿಸ್ಟಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ.

ಇದುವರೆಗೆ 8 ಚಿನ್ನ, 4 ಬೆಳ್ಳಿ ಹಾಗೂ 5 ಕಂಚುಗಳನ್ನು ಜಯಿಸಿರುವ ಭಾರತ ಒಟ್ಟು 17 ಪದಕಗಳೊಂದಿಗೆ ಸದ್ಯ ಮೂರನೇ ಸ್ಥಾನದಲ್ಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com