ಧರ್ಮದ ಹೋರಾಟದಲ್ಲಿ ಅಪಸ್ವರ : ಲಿಂಗಾಯಿತ ಧರ್ಮದಿಂದ ಹೊರಬರಲು ಗಾಣಿಗರ ನಿರ್ಧಾರ

ಬಾಗಲಕೋಟೆ : ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಅಪಸ್ವರ ಕೇಳಿಬಂದಿದೆ. ಲಿಂಗಾಯತ ಸಮಾಜದಿಂದ ಹೊರಬರಲು ಗಾಣಿಗ ಸಮಾಜ ನಿರ್ಧರಿಸಿದ್ದು, ನಾವು ಲಿಂಗಾಯಿತ ಸಮುದಾಯದವರೇ ಅಲ್ಲ ಎಂದಿದ್ದಾರೆ.
ಈ ಸಂಬಂಧ ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗಾಣಿಗ ಸಮುದಾಯದ ಮುಖಂಡರು, ನಾವು ಹಿಂದೂ ಗಾಣಿಗರು, ಆದ್ರೆ ಆಚರಣೆಯಲ್ಲಿ ಲಿಂಗಾಯತರು. ನಮ್ಮ ಸಮಾಜದವನ್ನ ಲಿಂಗಾಯತ ಧರ್ಮದಿಂದ ಕೈ ಬಿಡಬೇಕು.ನಮ್ಮ ಸಮಾಜದ ಒಪ್ಪಿಗೆ ಕೇಳದೆ ಲಿಂಗಾಯತ ಧರ್ಮದಲ್ಲಿ ಸೇರಿಸಲಾಗಿದೆ. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ,ಅಡ್ವೊಕೇಟ್ ಜನರಲ್ ಗಳಿಗೆ ನೋಟೀಸ್ ಕಳಿಸುತ್ತೇವೆ ಎಂದಿದ್ದಾರೆ.
ಅಲ್ಲದೆ, ಹಿಂದೂ ಸಮಾಜದಲ್ಲಿ ನಮಗೆ 2A ಮೀಸಲಾತಿ ಇದೆ. ಶೇ. 25 ರಷ್ಟು ಮೀಸಲಾತಿ ಪಡೆಯುತ್ತಿದ್ದು ಇದರಲ್ಲಿಯೇ ಮುಂದುವರೆಯುತ್ತೇವೆ. ವೀರಶೈವ ಮತ್ತು ಲಿಂಗಾಯತ ಹೋರಾಟಕ್ಕೂ ನಮಗೂ ಸಂಬಂಧವಿಲ್ಲ. ನಮ್ಮನ್ನ ಲಿಂಗಾಯತ ಧರ್ಮದಿಂದ ಕೈ ಬಿಡದಿದ್ದರೆ ಹೋರಾಟ ಮಾಡುವುದಾಗಿ ಗಾಣಿಗ ಸಮುದಾಯದ ಮುಖಂಡ ಶೇಖರ್ ಸಜ್ಜನರ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com