CWG 2018 : ಶೂಟಿಂಗ್ : ಬೆಳ್ಳಿ ಗೆದ್ದ ಮೇಹುಲಿ ಘೋಷ್, ಅಪೂರ್ವಿಗೆ ಕಂಚಿನ ಪದಕ

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮತ್ತೆರಡು ಪದಕಗಳು ಲಭಿಸಿವೆ. ಸೋಮವಾರ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಮೇಹುಲಿ ಘೋಷ್ ರಜತ ಪದಕವನ್ನು ಜಯಿಸಿದ್ದಾರೆ.

ಭಾರತದ ಮತ್ತೋರ್ವ ಮಹಿಳಾ ಶೂಟರ್ ಅಪೂರ್ವಿ ಚಂಡೇಲಾ 10 ಮೀಟರ್ ರೈಫಲ್ ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಪ್ರಥಮ ಸ್ಥಾನ ಗಳಿಸಿದ ಸಿಂಗಾಪುರದ ಮಾರ್ಟಿನಾ ಲಿಂಡ್ಸೆ ವೆಲೋಸೊ ಬಂಗಾರದ ಪದಕವನ್ನು ಜಯಿಸದರು.

ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ ಚಿನ್ನ ಹಾಗೂ ಹೀನಾ ಸಿಧು ಬೆಳ್ಳಿ ಪದಕ ಪಡೆದಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com