‘ ಕೊಹ್ಲಿ ನನ್ನಂತೆಯೇ ಶರ್ಟ್ ಬಿಚ್ಚಿ ಸಂಭ್ರಮಿಸಲಿದ್ದಾರೆ ‘ : ಭವಿಷ್ಯ ನುಡಿದ ಸೌರವ್ ಹೇಳಿದ್ದೇನು..?

2002 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ನಡೆದ ನ್ಯಾಟ್ ವೆಸ್ಟ್ ಟ್ರೋಫಿಯ ಫೈನಲ್ ಮ್ಯಾಚ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸ್ಮರಣೀಯವಾದುದು. ಇಂಗ್ಲೆಂಡ್ ನೀಡಿದ್ದ 326 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿದ್ದ ಭಾರತ ಜಯಭೇರಿ ಬಾರಿಸಿತ್ತು.

ಲಾರ್ಡ್ಸ್ ಮೈದಾನದ ಪೆವಿಲಿಯನ್ ನಲ್ಲಿ ಕುಳಿತಿದ್ದ ಟೀಮ್ ಇಂಡಿಯಾ ನಾಯಕ ಸೌರವ್ ಗಂಗೂಲಿ, ಗೆಲುವಿನ ಬಳಿಕ ತಮ್ಮ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು. ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಹಾಗೂ ಮೊಹಮ್ಮದ್ ಕೈಫ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಸದ್ಯ ಟೀಮ್ ಇಂಡಿಯಾದ ನಾಯಕನಾಗಿರುವ ವಿರಾಟ್ ಕೊಹ್ಲಿ ಕೂಡ ದಾದಾರಂತೆಯೇ ಶರ್ಟ್ ಬಿಚ್ಚಿ ಸೆಲೆಬ್ರೇಟ್ ಮಾಡಲಿದ್ದಾರಂತೆ. ಹೌದು, ಸ್ವತಃ ಸೌರವ್ ಗಂಗೂಲಿ ಅವರೇ ಕೊಹ್ಲಿ ಬಗ್ಗೆ ಈ ಮಾತನ್ನು ಹೇಳಿದ್ದಾರೆ.

‘ ಇಂಗ್ಲೆಂಡ್ ನಲ್ಲಿ ನಡೆಯಲಿರುವ 2019 ವಿಶ್ವಕಪ್ ಟ್ರೋಫಿಯನ್ನು ಗೆದ್ದು ವಿರಾಟ್ ಕೊಹ್ಲಿ ನನ್ನಂತೆಯೇ ಶರ್ಟ್ ಬಿಚ್ಚಿ ಸಂಭ್ರಮಿಸಲಿದ್ದಾರೆ ‘ ಎಂದು ಸೌರವ್ ಭವಿಷ್ಯ ನುಡಿದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com