ದಲಿತರಿಗಾಗಿ ಪ್ರಧಾನಿ ಮೋದಿ ಏನೂ ಮಾಡಿಲ್ಲ : BJP ಸಂಸದರಿಂದಲೇ ಆರೋಪ

ದೆಹಲಿ : ಉತ್ತರ ಪ್ರದೇಶದ ಬಿಜೆಪಿ ಸಂಸದರೊಬ್ಬರು ಪ್ರಧಾನಿ ಮೋದಿ ವಿರುದ್ದವೇ ಆರೋಪ ಮಾಡಿದ್ದಾರೆ. ಬಿಜೆಪಿ ಸಂಸದ ಯಶ್ವಂತ್‌ ಸಿಂಗ್‌ ಅವರು, ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿ ನಾಲ್ಕು ವರ್ಷಗಳಾಗಿವೆ. ಆದರೆ ಇದುವರೆಗೂ ದಲಿತರಿಗಾಗಿ ಏನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಜೊತಗೆ ಮೀಸಲಾತಿ ಇರುವುದರಿಂದ ನಮ್ಮಂತಹವರಿಗೆ ಅನುಕೂಲವಾಗಿದೆಯಷ್ಟೇ. ಮೀಸಲಾತಿ ಇಲ್ಲದಿದ್ದರೆ ದಲಿತರು ಇಂದೂ ಹಿಂದುಳಿದೇ ಇರಬೇಕಾಗುತ್ತಿತ್ತು.  ಮೀಸಲಾತಿ ಸಂಬಂಧ ಮಸೂದೆ ಅಂಗೀಕಾರಕ್ಕಾಗಿ ನಾವು ನಿಮ್ಮ ಬಳಿ ಕೇಳುತ್ತಲೇ ಇದ್ದೇವೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿ ದಲಿತರಿಗಾಗಿ ಏನೂ ಮಾಡುತ್ತಿಲ್ಲ ಎಂದಿದ್ದಾರೆ.

ನಾನು ಸಂಸದನಾಗಿ ಆಯ್ಕೆಯಾದಾಗ ಮೀಸಲಾತಿ ಕುರಿತು ಮಾತನಾಡಲು ಅಲೆದಾಡಿದ್ದೆ. ಆದರೆ ನಿಮ್ಮ ಸರ್ಕಾರದಿಂದ ನನಗೆ ಯಾವ ಭರವಸೆಯೂ ಸಿಗಲಿಲ್ಲ. ಈಗಲಾದರೂ ದಲಿತರ ಬಗ್ಗೆ ಗಮನ ಹರಿಸಿ ಎಂದು ಪತ್ರದ ಮೂಲಕ ಪ್ರಧಾನಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published.