ವೈರಲ್ ಆಗ್ತಿದೆ ಮತ್ತೊಂದು ಡೆಡ್ಲಿ ಗೇಮ್‌ : ಕಾಂಡೋಮ್ ಬಳಸಿ ಆಡ್ತಿದ್ದಾರೆ ಇಂತಹ ಆಟ !!

ಇತ್ತೀಚೆಗಷ್ಟೇ ಸೋಶಿಯಲ್‌ ಮೀಡಿಯಾಗಳಲ್ಲಿ ಅನೇಕ ಸ್ಪರ್ಧೆಗಳು ನಡೆಯುತ್ತಿವೆ.ಅವುಗಳಲ್ಲಿ ಕೆಲ ವಿಚಿತ್ರ ಆಟಗಳೂ ಸೇರಿಕೊಂಡಿದ್ದು, ಜೀವಕ್ಕೇ ಆಪತ್ತು ಉಂಟು ಮಾಡುವಂತಹವುಗಳಾಗಿವೆ.

ಇತ್ತೀಚೆಗಷ್ಟೇ ಬ್ಲೂವೇಲ್‌, ಐಸ್ ಬಕೆಟ್‌ ಚಾಲೆಂಜ್‌ ಗೇಮ್‌ಗಳು ಪೋಷಕರ ನಿದ್ದೆ ಕೆಡಿಸಿದ್ದವು. ಅದೇ ರೀತಿ ಇದೇ ರೀತಿಯ ಇನ್ನೊಂದು ರೀತಿಯ ಆಟ ಬಂದಿದೆ. ಅದೇ ಸ್ನಾರ್ಟಿಂಗ್‌ ಕಾಂಡೋಮ್‌.

ಕಾಂಡೋಮ್‌ ಒಂದನ್ನು ಮೂಗಿನಲ್ಲಿ ತೂರಿಸಿ ಅದನ್ನು ಬಾಯಿಯ ಮೂಲಕ ಹೊರಗೆಳೆಯುವ ಆಟವೇ ಸ್ನಾರ್ಟಿಂಗ್ ಕಾಂಡೋಮ್‌.  ಈ ಆಟ ಅಪಾಯಕಾರಿಯಾಗಿದ್ದು, ಉಸಿರುಗಟ್ಟಿ ಸಾಯುವ ಸಾಧ್ಯತೆ ಹೆಚ್ಚಿರುತ್ತದೆ.

ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ಆಟವಾಗಿದ್ದು, ಈಗ ವೈರಲ್ ಆಗುತ್ತಿದೆ. ಈ ಆಟ ಮಕ್ಕಳ ಗಮನವನ್ನೂ ಸೆಳೆದಿದ್ದು, ಮಕ್ಕಳು ಸಹ ಈ ಗೇಮ್‌ ಆಡಿ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಾಕುತ್ತಿದ್ದಾರೆ. ಮೂಗಿನ ಒಂದು ಹೊಳ್ಳೆಯಿಂದ ಕಾಂಡೋಮನ್ನು ಒಳಗೆಳೆದುಕೊಂಡು ಬಳಿಕ ಅದನ್ನು ಗಂಟಲಿನ ಮೂಲಕ ಹೊರಗೆಳೆದುಕೊಳ್ಳಲಾಗುತ್ತದೆ.

ಅನೇಕ ತಜ್ಞರು, ಈ ಆಟದಲ್ಲಿ ಭಾಗಿಯಾಗದಂತೆ ಯುವಜನತೆಗೆ ಎಚ್ಚರಿಕೆ ನೀಡಿದ್ದಾರೆ. ಈ ಆಟ ಆಡುವುದರಿಂದ ಉಸಿರಾಟಕ್ಕೆ ತೊಂದರೆಯಾಗಿ ಜೀವ ಹೋಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಕಾಂಡೋಮ್‌ನ ಮೇಲ್ಭಾಗದಲ್ಲಿ ವೀರ್ಯಾಣುಗಳನ್ನು ಕೊಲ್ಲುವ ಕೆಲ ರಸಾಯನಿಕಗಳನ್ನು ಸಿಂಪಡಿಸಲಾಗಿರುತ್ತದೆ. ಇದು ಮೂಗಿನ ಒಳಗೆ ಹೋದರೆ ಜೀವಕ್ಕೆ ಕುತ್ತು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

 

Leave a Reply

Your email address will not be published.