CWG 2018 : ಶೂಟಿಂಗ್ : ಚಿನ್ನ ಗೆದ್ದ ಮನು ಭಾಕರ್, ಹೀನಾ ಸಿಧುಗೆ ಬೆಳ್ಳಿ

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಎರಡು ಪದಕಗಳು ದೊರೆತಿವೆ. ಮಹಿಳೆಯರ 10 ಮೀಟರ್ ಏರ್ ಪಿಸ್ಟಲ್ ಶೂಟಿಂಗ್ ವಿಭಾಗದಲ್ಲಿ 16 ವರ್ಷದ ಮನು ಭಾಕರ್ ಚಿನ್ನದ ಪದಕವನ್ನು ಜಯಿಸಿದ್ದಾರೆ. ಭಾರತದ ಮತ್ತೋರ್ವ ಶೂಟರ್ ಹೀನಾ ಸಿಧು ಮಹಿಳೆಯರ 10 ಮೀಟರ್ ಪಿಸ್ಟಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಮನು ಭಾಕರ್ 240.9 ಪಾಯಿಂಟ್ ಸ್ಕೋರ್ ಮಾಡಿ ಪ್ರಥಮ ಸ್ಥಾನ ಗಳಿಸಿದರು. 234 ಪಾಯಿಂಟ್ಸ್ ಸ್ಕೋರ್ ಮಾಡಿದ ಹೀನಾ ಸಿಧು ದ್ವಿತೀಯ ಸ್ಥಾನ ಗಳಿಸಿದರು. 214.9 ಪಾಯಿಂಟ್ಸ್ ಪಡೆದ ಆಸ್ಟ್ರೇಲಿಯಾದ ಎಲೆನಾ ಗಯಾಲಿಬೋವಿಚ್ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

Leave a Reply

Your email address will not be published.

Social Media Auto Publish Powered By : XYZScripts.com