ರಾಮನಗರ : ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರ ಸಾವು

ರಾಮನಗರ : ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ರಾಮನಗರದ ಚಿಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶೇಖರ್ (35) ಸುಮಿತ್ರಾ (28) ಹಂಸ (7) ಧನುಷ್ (6) ಮೃತ ದುರ್ದೈವಿಗಳಾಗಿದ್ದಾರೆ.

ಮೃತರು ಮೂಲತಃ ಚನ್ನಪಟ್ಟಣದ ಹನುಮಂತನಗರದವರು, ಬೆಂಗಳೂರಿನ ಕುಮಾರಸ್ವಾಮಿ ಲೇ ಔಟ್ ನಲ್ಲಿ ವಾಸವಿದ್ದರು. ಸಂಬಂಧಿ ರಾಜು ಎಂಬುವರ ಮನೆಗೆ ಆಗಮಿಸಿದ್ದರು. ಈ ವೇಳೆ ಈಜಲು ತೆರಳಿದಾಗ ಅವಘಡ ಸಂಭವಿಸಿದೆ.

ಗ್ರಾಮದ ನಾಗಪ್ಪ ದೇವಾಲಯದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com