Cwg 2018 : ಟೇಬಲ್ ಟೆನಿಸ್‍ನಲ್ಲಿ ಭಾರತಕ್ಕೆ ಮೊದಲ ಚಿನ್ನ : ಇತಿಹಾಸ ರಚಿಸಿದ ಮಹಿಳಾ ತಂಡ

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಪಟ್ಟಿಗೆ ಮತ್ತೊಂದು ಚಿನ್ನದ ಪದಕ ಸೇರಿಕೊಂಡಿದೆ. ಟೇಬಲ್ ಟೆನಿಸ್ ನಲ್ಲಿ ಭಾರತದ ಮಹಿಳೆಯರ ತಂಡ ಸ್ವರ್ಣ ಪದಕವನ್ನು ಗೆದ್ದುಕೊಂಡಿದೆ.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಟ ಸಿಂಗಾಪುರ್ ತಂಡವನ್ನು ಮಣಿಸಿದ ವನಿತೆಯರ ತಂಡ ಸ್ವರ್ಣ ಪದಕ ಜಯಿಸಿದೆ. ಕಾಮನ್ವೆಲ್ತ್ ಇತಿಹಾಸದಲ್ಲಿಯೇ ಟೇಬಲ್ ಟೆನಿಸ್ ಆಟದಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನ ಇದಾಗಿದೆ.

ಪ್ರಬಲ ಹೋರಾಟ ನಡೆಸಿದ ಮಾನಿಕಾ ಬತ್ರಾ ಎರಡು ಸಿಂಗಲ್ಸ್ ಪಂದ್ಯಗಳಲ್ಲಿ ವಿಶ್ವ ನಂ. 4 ಟಿಯಾನ್ ವೆ ಫೆಂಗ್ ಹಾಗೂ ಯಿಹಾನ್ ಝೌ ಅವರನ್ನು ಸೋಲಿಸಿದರು. ಮೌಮಾ ದಾಸ್ ಹಾಗೂ ಮಧುರಿಕಾ ಪಾಟ್ಕರ್ ಜೋಡಿ ಡಬಲ್ಸ್ ನಲ್ಲಿ ಯಿಹಾನ್ ಝೌ ಹಾಗೂ ಮೆಂಗ್ಯೂ ಜೋಡಿಯನ್ನು ಮಣಿಸಿದರು.

Leave a Reply

Your email address will not be published.