ಕಾವೇರಿ ನಿರ್ವಹಣಾ ಮಂಡಳಿಗಾಗಿ ತಮಿಳು ಚಿತ್ರೋದ್ಯಮದಿಂದ ಉಪವಾಸ ಸತ್ಯಾಗ್ರಹ
ಚೆನ್ನೈ : ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಲೇಬೇಕು ಎಂದು ತಮಿಳುನಾಡಿನಲ್ಲಿ ಬಂದ್ ನಡೆಸಲಾಗಿತ್ತು. ಇದಾದ ಬಳಿಕ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳು ಚಿತ್ರೋದ್ಯಮ ಉಪವಾಸ ಸತ್ಯಾಗ್ರಹ ಕೈಗೊಂಡಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಮಂಡಳಿ ರಚನೆ ಮಾಡಿ ಎಂದು ಕಾಲಿವುಡ್ ಚಿತ್ರೋದ್ಯಮ ಚೆನ್ನೈನ ವಾಲುವಾರ್ ಕೊಟ್ಟಂ ಬಳಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಈ ಸತ್ಯಾಗ್ರಹದಲ್ಲಿ ನಟ, ರಾಜಕಾರಣಿ ರಜಿನೀಕಾಂತ್, ಕಮಲ್ ಹಾಸನ್, ವಿಕ್ರಂ, ವಿಜಯ್, ವಿಶಾಲ್, ಶಿವಕುಮಾರ್, ಸೂರ್ಯ, ಸಂಗೀತ ನಿರ್ದೇಶಕ ಇಳಯರಾಜ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗಿದ್ದು, ಎಲ್ಲೆಲ್ಲೂ ಪೊಲೀಸರು ಸರ್ಪಗಾವಲು ಹಾಕಿದ್ದಾರೆ.