ಮಾತೆ ಮಹಾದೇವಿ ಕಾವಿ ಬಿಟ್ಟು ಖಾದಿ ತೊಡಲಿ : ವೀರಶೈವ ಮುಖಂಡ ಕಿಡಿ

ಕಲಬುರಗಿ : ಕಾಂಗ್ರೆಸ್‌ಗೆ ಎಲ್ಲಾ ಲಿಂಗಾಯಿತರು ಮತ ಹಾಕಿ ಎಂದಿದ್ದ ಮಾತೆ ಮಹಾದೇವಿ ವಿರುದ್ಧ ವೀರಶೈವ ಲಿಂಗಾಯಿತ ಸಮನ್ವಯ ಸಮಿತಿ  ಅಧ್ಯಕ್ಷ ಚಂದ್ರಶೇಖರ ಹಿರೇಮಠ್‌ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತೆ ಮಹಾದೇವಿ ತಮ್ಮ ಬುದ್ದಿಯನ್ನು ತೋರಿಸಿದ್ದಾರೆ. ಮಠಾಧೀಶರು ಕಾಂಗ್ರೆಸ್ ಬೆಂಬಲಿಸುವುದಾಗಿ ತಿಳಿಸಲು ಮಾತೆ ಮಹಾದೇವಿಗೆ ಏನು ಹಕ್ಕಿದೆ. ಮಾತೆ ಮಹಾದೇವಿ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿರುವುದು ಸರಿಯಲ್ಲ. ಬೇಕಿದ್ದರೆ ಅವರು ಕಾವಿ ಬಿಟ್ಟು ಖಾದಿ ತೊಟ್ಟು ರಾಜಕೀಯ ಮಾಡಲಿ. ಈ ರೀತಿ ಒಂದು ಪಕ್ಷದ ಪರವಾಗಿ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ. ನಾವು ಬಿಜೆಪಿಯೂ ಅಲ್ಲ, ಕಾಂಗ್ರೆಸ್ ಪಕ್ಷವೂ ಅಲ್ಲ. ಮಠಾಧೀಶರು ಅವರವರ ಇಷ್ಟಕ್ಕೆ ತಕ್ಕಂತೆ ಯಾರನ್ನಾದರೂ ಬೆಂಬಲಿಸಲಿ. ಆದರೆ ಮಠಾಧೀಶರ ಪರವಾಗಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಗುಡುಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com