ಸಾರಿಗೆ ಬಸ್ ಹಾಗೂ ಕ್ರೂಸರ್‌ ಮಧ್ಯೆ ಭೀಕರ ಅಪಘಾತ : ನಾಲ್ವರ ಸಾವು

ಧಾರವಾಡ : ಪ್ರವಾಸಕ್ಕೆಂದು ಹೊರಟಿದ್ದ ವೇಳೆ  ನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದಂಪತಿ ಸಮೇತ 4 ವರ್ಷದ ಮಗು ಹಾಗೂ ಕ್ರೂಸರ್‌ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಧಾರವಾಡ ತಾಲ್ಲೂಕಿನ ಮುರಕಟ್ಟಿ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಮೃತರನ್ನು ಇಮ್ರಾನ್ ಮಕಾಂನದಾರ (38), ಆಫ್ರೀನ ಮಕಾಂನದಾರ (28) ಹಾಗೂ ಮಗಳು ಆಯಿಷಾ (4) ಎಂದು ಹೆಸರಿಸಲಾಗಿದೆ. ಅಲ್ಲದೆ  ಕ್ರೂಸರ ಚಾಲಕ ಸಹ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನು ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.