ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿದೆ ಎಂದರೆ ಅದಕ್ಕೆ ಕಾಂಗ್ರೆಸ್‌ ಕಾರಣ : ನಾನಾ ಪಾಟೇಕರ್‌

ದೆಹಲಿ : ಖ್ಯಾತ ಬಾಲಿವುಡ್‌ ನಟ ನಾನಾ ಪಾಟೇಕರ್‌ ಕಾಂಗ್ರೆಸ್‌ ಪಕ್ಷವನ್ನು ಹೊಗಳಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿರುವುದಕ್ಕೇ ಕೇವಲ ಕಾಂಗ್ರೆಸ್‌ ಮಾತ್ರ ಕಾರಣ. ಇನ್ಯಾವುದೇ ಪಕ್ಷವಿದ್ದರೂ ಪ್ರಜಾಪ್ರಭುತ್ವ ಉಳಿಯುತ್ತಿರಲಿಲ್ಲ ಎಂದಿದ್ದಾರೆ.

ತಮ್ಮ ಎನ್‌ಜಿಒ ನಾಮ್ ಫೌಂಡೇಶನ್‌ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ತನ್ನ ಸಂಸ್ಥಾಪನಾ ದಿನದಂದು ಕಾಂಗ್ರೆಸ್‌ ಮೇಲೆ ಆಪಾದನೆಗಳನ್ನು ಮಾಡಿತ್ತು. ಕಾಂಗ್ರೆಸ್‌ 60 ವರ್ಷದಲ್ಲಿ ಏನೂ ಮಾಡಲಿಲ್ಲ ಎಂದು ಮಾತ್ರ ಹೇಳಬೇಡಿ. ರಾಜಕಾರಣಿಗಳಿಗೆ ಮೋಜು ಮಾಡುವುದು ಗೊತ್ತು. ಆದರೆ ಇಂದು ದೇಶದ ಸ್ಥಿತಿ ಏನಾಗಿದೆ ಎಂಬುದು ಯಾರೂ ಯೋಚಿಸುತ್ತಿಲ್ಲ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದ್ದರೆ ಅದು ಕೇವಲ ಕಾಂಗ್ರೆಸ್‌ನಿಂದ ಮಾತ್ರ. ಇದು ಕಾಂಗ್ರೆಸ್‌ನ ಸಾಧನೆಯಲ್ಲವೇ ಎಂದಿದ್ದಲ್ಲದೆ, ಶರದ್‌ ಪವಾರ್‌ ಅಂತಹವರನ್ನು ದೇಶದ ಪ್ರಧಾನಿ ಸ್ಥಾನದಲ್ಲಿ ನೋಡಲು ಇಚ್ಛೆಪಡುವುದಾಗಿ ಹೇಳಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com