WATCH : ಇಂಜಿನ್‌ ಇಲ್ಲದೆ ಹಿಮ್ಮುಖವಾಗಿ ಚಲಿಸಿದ ರೈಲು……ಆಮೇಲಾಗಿದ್ದೇನು ?

ಭುವನೇಶ್ವರ : ಒರಿಸ್ಸಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಂಜಿನ್ ಇಲ್ಲದೇ ರೈಲೊಂದು 10 ಕಿ.ಮೀ ಸಂಚರಿಸಿದ್ದು, ಕೊನೆಗೆ ಕಲ್ಲುಗಳನ್ನು ಅಡ್ಡವಾಗಿ ನಿಲ್ಲಿಸಿ ರೈಲನ್ನು ನಿಲ್ಲಿಸಲಾಗಿದೆ.

ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಅಹಮದಾಬಾದ್‌ -ಪುರಿ ಎಕ್ಸ್‌ಪ್ರೆಸ್‌ ರೈಲು ಚಿಟ್ಲಾಗ್ರಾ ರೈಲು ನಿಲ್ದಾಣದಲ್ಲಿ ನಿಂತಿತ್ತು. ಈ ವೇಳೆ ಇಂಜಿನ್‌ ಇಲ್ಲದಿದ್ದರೂ ಹಿಮ್ಮುಖವಾಗಿ ಚಲಿಸಿದೆ. ಕೂಡಲೆ ರೈಲು ನಿಲ್ಲಿಸಲು ಎಷ್ಟೇ ಪ್ರಯತ್ನಿಸಿದರೂ ಇಳಿಜಾರು ಮಾರ್ಗವಾಗಿದ್ದ ಹಿನ್ನೆಲೆಯಲ್ಲಿ ರೈಲಿನ ಬೋಗಿಗಳು ವೇಗವಾಗಿ ಚಲಿಸಿವೆ.

ಬಳಿಕ ಕೇಸಿಂಗಾ ಪ್ರದೇಶದ ಬಳಿ ರೈಲಿನ ಬೋಗಿಗಳಿಗೆ ಕಲ್ಲುಗಳನ್ನು ಅಡ್ಡಲಾಗಿ ಇಟ್ಟು ನಿಲ್ಲಿಸಲಾಗಿದೆ. ಈ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆ ಸಂಬಂಧ ಕೆಲ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com