ಬೆಳಗಾವಿ : ಈಜಲು ತೆರಳಿದ ಮೂವರು ಮಕ್ಕಳು ನೀರು ಪಾಲು…..

ಬೆಳಗಾವಿ : ಈಜಲು ಹೋದ ಮೂವರು ಮಕ್ಕಳು ನೀರು ಪಾಲಾಗಿರುವ ಘಟನೆ ಬೆಳಗಾವಿ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ನಡೆದಿದೆ. ಕುಷಾಲ ಕಲ್ಲಪ್ಪ ಚೌಗಲೆ ( ೧೨), ಆಕಾಶ ಕಲ್ಲಪ್ಪ ಚೌಗಕೆ (೧೫), ಸಾಹೀಲ್ ಮನೊಹರ ಬಾಳೆಕುಂದ್ರಿ (೧೩) ಎಂಬ ಮಕ್ಕಳು ಕೆರೆಯಲ್ಲಿ ಮುಳುಗಿ ಸಾವನಪ್ಪಿದ್ದಾರೆ.

ಶಾಲೆ ರಜೆ ಕಾರಣ ದನಗಳ ಮೈ ತೊಳೆಯಲು ಮಕ್ಕಳು ಹೊಂಡಕ್ಕಿಳಿದಿದ್ದರು. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ‌ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com