ಇನ್ನೈದು ವರ್ಷ ಸಿದ್ದರಾಮಯ್ಯನವರದ್ದೇ ಆಡಳಿತ : ರಾಹುಲ್‌ ಗಾಂಧಿ

ಬೆಂಗಳೂರು : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಸಿದ್ದರಾಮಯ್ಯ ಇನ್ನೂ ಐದು ವರ್ಷ ಆಡಳಿತ ನಡೆಸುವುದು ಶತಸಿದ್ಧ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್, ಮುಂದಿನ ಸಿಎಂ ಅಭ್ಯರ್ಥಿ ಸಿದ್ದರಾಮಯ್ಯ, ಅಧಿಕಾರಕ್ಕೆ ಬಂದರೆ ಅವರೇ ಸಿಎಂ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ, ಇದು ಸಿದ್ದರಾಮಯ್ಯ ಹಾಗೂ ವೇಣುಗೋಪಾಲ್‍ಗೆ ಸಂಬಂಧಿಸಿದ ವಿಚಾರ ಎಂದಿದ್ದಾರೆ. ಅವರೇ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ನಿರ್ಧರಿಸಲಿದ್ದಾರೆ. ಆ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಇದೆ ಎಂದರು.

ಮಠಗಳಿಗೆ ನಾನು ಭೇಟಿ ನೀಡಿದ್ದ ಸಂದರ್ಭ, ರಾಜಕೀಯ ವಿಚಾರ ಮಾತನಾಡಿಲ್ಲ. ಆಧ್ಯಾತ್ಮಿಕ ವಿಚಾರಗಳಲ್ಲಿ ನನಗೂ ಆಸಕ್ತಿ ಇದೆ ಎಂದಿದ್ದಾರೆ. ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಜನ ಮತ ಚಲಾಯಿಸುತ್ತಾರೆ. ಮುಂದಿನ ಲೋಕಸಭೆ ಚುನಾವಣೆಗೆ ಇಲ್ಲಿಂದಲೇ ಅಡಿಗಲ್ಲು ಬೀಳಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಬಳಿಕ ವಿಧಾನಸೌಧದಿಂದ ಎಂ.ಜಿ ರೋಡ್‌ವರೆಗೆ ಮೆಟ್ರೋ ರೈಲಿನಲ್ಲಿ ರಾಹುಲ್‌ ಗಾಂಧಿ ಪ್ರಯಾಣ ಬೆಳೆಸಿದ್ದು, ಬಳಿಕ ಎಂ.ಜಿ ರೋಡ್‌ನ ಬುಕ್‌ವಾರ್ಮ್‌ ಸ್ಟೋರ್‌ನಿಂ ಪುಸ್ತಕಗಳನ್ನು ಖರೀದಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com