ಮತ್ತೊಂದು ದಾಖಲೆ ಬರೆದ ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌…ಏನದು ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತೊಂದು ದಾಖಲೆ ಬರೆದಿದ್ದಾರೆ. ಟ್ವಿಟರ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಕನ್ನಡದ ನಟ ಎಂಬ ಖ್ಯಾತಿ ಗಳಿಸಿದ್ದ ಕಿಚ್ಚ, ಇನ್ಸ್ಟಾಗ್ರಾಂ ತೆರೆದು ಕೆಲವೇ ತಿಂಗಳಲ್ಲಿ 10 ಲಕ್ಷ ಫಾಲೋವರ್ಸ್‌ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.

ಕಿಚ್ಚ ಸುದೀಪ್‌ ಸೋಶಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಅಭಿಮಾನಿಗಳಿಗೆ ಟ್ವಿಟರ್‌ನಲ್ಲಿ ಹೆಚ್ಚು ಹೆಚ್ಚು ಸಂದೇಶ ಕಳಿಸುವ ಕಿಚ್ಚ, ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲಿ ಕೊಂಚ ಸಮಯವನ್ನಾದರೂ ಅಭಿಮಾನಿಗಳಿಗಾಗಿ ಮೀಸಲಿಡುತ್ತಾರೆ.

ಆದರೆ ಇಷ್ಟು ದಿನ ಟ್ವಿಟರ್‌ನಲ್ಲಿ ಆ್ಯಕ್ಟಿವ್‌ ಆಗಿದ್ದ ಸುದೀಪ್‌, ಇತ್ತೀಚೆಗೆ ಇನ್ಸ್ಟಾಗ್ರಾಂ ತೆರೆದಿದ್ದರೂ. ಆದರೂ ಅದರಲ್ಲಿ ಹೆಚ್ಚಿನ ಫೋಟೋ ಹಾಕುತ್ತಿರಲಿಲ್ಲ. ಆದರೂ ಕಿಚ್ಚನ ಇನ್ಸ್ಟಾಗ್ರಾಂಗೆ ಕಿಮೆ ಸಮಯದಲ್ಲಿ 10 ಲಕ್ಷ ಮಂದಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com